ಸದ್ಯ ಟೀಮ್ ಇಂಡಿಯಾ ಇಂದೋರ್‌ನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಂಡಿದೆ. ಹೋಟೆಲ್ ಮೂಲಗಳ ಪ್ರಕಾರ, ಟೀಮ್ ಇಂಡಿಯಾ ನಾಯಕ ಶುಭಮಾನ್ ಗಿಲ್, 3 ಲಕ್ಷ ರೂ. ಮೌಲ್ಯದ ನೀರು ಶುದ್ಧೀಕರಣ (ವಾಟರ್ ಪ್ಯೂರಿಫಿಕೇಶನ್) ಯಂತ್ರವನ್ನು ಹೋಟೆಲ್ನಲ್ಲಿ ತಮ್ಮ ರೂಮಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಯಂತ್ರ ರಿವರ್ಸ್ ಆಸ್ಮೋಸಿಸ್ ಪ್ರಕ್ರಿಯೆ ಮೇಲೆ ಶುದ್ಧೀಕರಿಸಿದ ಹಾಗೂ ಪ್ಯಾಕೇಜ್ ಬಾಟಲ್ ನೀರನ್ನು ಸಹ ಶುದ್ಧೀಕರಣ ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಹೋಟೆಲ್ನ ತನ್ನ ವೈಯಕ್ತಿಕ ಕೋಣೆಯಲ್ಲಿ ಗಿಲ್, ಈ ಯಂತ್ರವನ್ನು ಅಳವಡಿಸಿಕೊಂಡಿದ್ದಾರೆ.