ಮೈದಾನದಲ್ಲೇ ಕ್ಯಾಮೆರಾಮನ್ ಕಾಲು ಹಿಡಿದ ಶ್ರೇಯಸ್ ಅಯ್ಯರ್: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ವಿಡಿಯೋ ವೈರಲ್! Shreyas Iyer

ಕ್ಯಾಮರಾಮನ್​ ಬಳಿ ಶೂ ಎರವಲು ಪಡೆದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಭಾಗಿಯಾದ ಶ್ರೇಯಸ್​ ಅಯ್ಯರ್​
ಕ್ಯಾಮರಾಮನ್​ ಬಳಿ ಶೂ ಎರವಲು ಪಡೆದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಭಾಗಿಯಾದ ಶ್ರೇಯಸ್​ ಅಯ್ಯರ್​
Published on

ಪ್ರಮುಖ ಮುಖ್ಯಾಂಶಗಳು

  • ಭಾನುವಾರ (ಏ.19) ರಂದು ಪಂಜಾಬ್​ನಲ್ಲಿ ನಡೆದಿದ್ದ ಐಪಿಎಲ್​ ಪಂದ್ಯ
  • ಕಂಜಾಬ್​ ಕಿಂಗ್ಸ್​ ಮತ್ತು ಲಕ್ನೋ ನಡುವೆ ನಡೆದಿದ್ದ ಪಂದ್ಯ
  • ಕ್ಯಾಮರಾಮನ್​ ಬಳಿ ಶೂ ಎರವಲು ಪಡೆದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಭಾಗಿಯಾದ ಶ್ರೇಯಸ್​ ಅಯ್ಯರ್​
ವೈರಲ್​: ಭಾನುವಾರ (ಏಪ್ರಿಲ್ 19) ಪಂಜಾಬ್​ನ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಿಂಗ್ಸ್ ತಂಡ 54 ರನ್‌ಗಳ ಭರ್ಜರಿ ಜಯಗಳಿಸಿದ ನಂತರ, ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಪಂದ್ಯಾವಳಿ ನಂತರದ ಸಮಾರಂಭಕ್ಕೆ ತೆರಳುವ ಮೊದಲು ಕ್ಯಾಮೆರಾಮನ್‌ನಿಂದ ಶೂಗಳನ್ನು ಎರವಲು ಪಡೆಯುತ್ತಿರುವ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಪಂದ್ಯದ ನಂತರ, ಶ್ರೇಯಸ್ ಚಪ್ಪಲಿ ಧರಿಸಿ ಮೈದಾನದಲ್ಲಿ ಓಡಾಡುತ್ತಿದ್ದರು. ಆದರೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಟಗಾರರು ಚಪ್ಪಲಿ ಅಥವಾ ತೋಳಿಲ್ಲದ ಜೆರ್ಸಿ ಧರಿಸಿ ಬರುವುದನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಶ್ರೇಯಸ್​ ಅಯ್ಯರ್​ ಕ್ಯಾಮರಾಮನ್​ನಿಂದ ಶೂಗಳನ್ನು ಎರವಲು ಪಡೆಯುತ್ತಿರುವುದು ಕಂಡುಬಂದಿದೆ.

ವೈರಲ್​ ವಿಡಿಯೋಗೆ ನೆಟ್ಟಿಗರ ಫನ್ನಿ ಕಮೆಂಟ್ಸ್

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕಮೆಂಟ್​ಗಳ ಸುರಿಮಳೆ ಸುರಿದಿದೆ. ಕ್ಯಾಮರಾಮನ್​ ಸರಿಯಾದ ಸಮಯದಲ್ಲಿ ಸಿಕ್ಕಿದರು, ಇಲ್ಲದಿದ್ದರೆ ಶ್ರೇಯಸ್​ ಅಯ್ಯರ್​ ಮತ್ತೆ ದಂಡ ಕಟ್ಟ ಬೇಕಾಗುತ್ತಿತ್ತು ಎಂದು ಒಬ್ಬರು ಹೇಳಿದ್ದಾರೆ.
ನೋಡಿ ನಮ್ಮ ಕ್ಯಾಮರಾಗಳು ಕೇವಲ ವಿಡಿಯೋ ತೆಗೆಯುವುದು ಮಾತ್ರವಲ್ಲ, ಆಟಗಾರರ ಬಗ್ಗೆ ಸಹ ಕಾಳಜಿ ಹೊಂದಿರುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಶ್ರೇಯಸ್​ ನೀವು ಈ ಪಂದ್ಯದಲ್ಲಿ ಪಡೆದಿರುವ ಮೊತ್ತದಲ್ಲಿ ಒಂದು ಭಾಗವನ್ನು ಆ ಕ್ಯಾಮರಾಮನ್​ಗೆ ನೀಡಬೇಕೆಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

ಎಲ್​ಎಸ್​ಜಿ Vs ಪಂಜಾಬ್​

ಏಪ್ರಿಲ್​ 19 ರಂದು ಪಂಜಾಬ್​ನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲ್ಲಿ ನಡುವೆ ಎರಡನೇ ವಿಕೆಟ್‌ಗೆ ಕೇವಲ 80 ಎಸೆತಗಳಲ್ಲಿ 182 ರನ್‌ಗಳ ಅದ್ಭುತ ಜೊತೆಯಾಟದ ಮೂಲಕ 254/7 ರನ್‌ಗಳ ಬೃಹತ್ ಮೊತ್ತದೊಂದಿಗೆ ತಮ್ಮ ಇನ್ನಿಂಗ್ಸ್ಅನ್ನು ಕೊನೆಗೊಳಿಸಿತು.
ನಂತರ ಈ ಮೊತ್ತವನ್ನು ಬೆನ್ನತ್ತಿದ ಎಲ್​ಎಸ್​ಜಿ ತಂಡದಲ್ಲಿ ಸಂಘಟಿತ ಹೋರಾಟ ಕಂಡುಬರದ ಹಿನ್ನಲೆಯಲ್ಲಿ 20 ಓವರ್​ಗಳಲ್ಲಿ ಕೇವಲ 200 ರನ್​ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗೆಲುವಿನೊಂದಿಗೆ, ಕಿಂಗ್ಸ್ ತಂಡವು ತಮ್ಮ ಅಜೇಯ ಸರಣಿಯನ್ನು ಆರು ಪಂದ್ಯಗಳಿಗೆ ವಿಸ್ತರಿಸಿತು ಮತ್ತು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಪಂಜಾಬ್​ ಕಿಂಗ್ಸ್ ಶನಿವಾರ (ಏ.25) ರಂದು ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಎದುರಿಸಲಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net