ಕೊನೇ ಕ್ಷಣದಲ್ಲಿ ನಾನು ಮಾಡಿದ ಆ ತಪ್ಪಿನಿಂದಲೇ ನಮ್ಮ ತಂಡ ಸೋಲುಂಡಿತು: ರಶೀದ್​ ಖಾನ್​ ಅಚ್ಚರಿ ಹೇಳಿಕೆ! Rashid Khan

ಕೊನೇ ಕ್ಷಣದಲ್ಲಿ ನಾನು ಮಾಡಿದ ಆ ತಪ್ಪಿನಿಂದಲೇ ನಮ್ಮ ತಂಡ ಸೋಲುಂಡಿತು: ರಶೀದ್​ ಖಾನ್​ ಅಚ್ಚರಿ ಹೇಳಿಕೆ! Rashid Khan
ಕೊನೇ ಕ್ಷಣದಲ್ಲಿ ನಾನು ಮಾಡಿದ ಆ ತಪ್ಪಿನಿಂದಲೇ ನಮ್ಮ ತಂಡ ಸೋಲುಂಡಿತು: ರಶೀದ್​ ಖಾನ್​ ಅಚ್ಚರಿ ಹೇಳಿಕೆ! Rashid Khan
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಐಪಿಎಲ್​ ಆವೃತ್ತಿ ರೋಚಕ ಹಾದಿಯಲ್ಲಿ ಸಾಗುತ್ತಿದೆ
  • ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್​ ಟೈಟಾನ್ಸ್​ ನಡುವೆ ನಡೆದ ಪಂದ್ಯವೇ ಇದಕ್ಕೆ ಸಾಕ್ಷಿ
  • ಕೊನೆಯ ಕ್ಷಣದವರೆಗೂ ಹೋರಾಡಿದ ಗುಜರಾತ್​ ಟೈಟಾನ್ಸ್​ ಅಂತಿಮ ಕ್ಷಣದಲ್ಲಿ ಆರ್​ಆರ್​ ವಿರುದ್ಧ ಸೋಲುಂಡಿತು
Rashid Khan : ಪ್ರಸ್ತುತ ನಡೆಯುತ್ತಿರುವ 19ನೇ ಐಪಿಎಲ್​ ಆವೃತ್ತಿ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಅದಕ್ಕೆ ಸಾಕ್ಷಿ ನಿನ್ನೆ ನಡೆದ ಪಂದ್ಯ. ಕೊನೆಯ ಎಸೆತದವರೆಗೂ ನಡೆದ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ತಂಡ ಅಂತಿಮವಾಗಿ ಗುಜರಾತ್​ ಟೈಟಾನ್ಸ್​ ವಿರುದ್ಧ ಜಯಗಳಿಸಿತು. ಈ ಸೀಸನ್​ನಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿದರೂ, ಗುಜರಾತ್ ತಂಡ ತಮ್ಮ ಹೋರಾಟದ ಮನೋಭಾವದಿಂದ ಅಭಿಮಾನಿಗಳ ಹೃದಯ ಗೆದ್ದಿತು.
ನಿನ್ನೆ ನಡೆದ ಪಂದ್ಯದಲ್ಲಿ ಶುಭಮಾನ್​ ಗಿಲ್ ಬದಲಿಗೆ ನಾಯಕನಾಗಿ ರಶೀದ್​ ಖಾನ್​ ತಂಡವನ್ನು ಮುನ್ನೆಡೆಸಿದರು. ಗಿಲ್​ ಗಾಯಗೊಂಡಿದ್ದ ಕಾರಣ ರಶೀದ್ ಖಾನ್ ನಾಯಕನ ಸ್ಥಾನವನ್ನು ತುಂಬಿದರು. ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ರಶೀದ್, ನಾವು ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ. ಆರಂಭದಲ್ಲಿ, ರಾಜಸ್ಥಾನ ದೊಡ್ಡ ಸ್ಕೋರ್ ಗಳಿಸುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ನಮ್ಮ ಬೌಲರ್‌ಗಳು ಆರ್​ಆರ್​ ತಂಡವನ್ನು 210 ರನ್‌ಗಳಿಗೆ ಸೀಮಿತಗೊಳಿಸಿದರು ಎಂದರು.
ನಮ್ಮ ಬ್ಯಾಟಿಂಗ್​ ವಿಭಾಗದಿಂದ ಉತ್ತಮ ಆರಂಭ ಕೂಡ ಸಿಕ್ಕಿತು. ಮುಖ್ಯವಾಗಿ, ಇಬ್ಬರು ಆರಂಭಿಕರು ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದರೆ, ಮಧ್ಯಮ ಓವರ್‌ಗಳಲ್ಲಿ ಬಹುಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ನಾವು ಪಂದ್ಯದ ಮೇಲೆ ನಿಯಂತ್ರಣವನ್ನು ಕಳೆದುಕೊಂಡೆವು. ಆದಾಗ್ಯೂ, ದೊಡ್ಡ ಗುರಿಯನ್ನು ಬೆನ್ನಟ್ಟಲು ಒತ್ತಡ ಅನುಭವಿಸುವುದು ಸಹಜ. ಅಲ್ಲದೆ, ಅಂತಹ ಪಿಚ್‌ನಲ್ಲಿ ಪ್ರತಿ ಓವರ್‌ಗೆ 9 ರಿಂದ 10 ರನ್ ಗಳಿಸುವುದು ಕಷ್ಟವೇನಲ್ಲ. ಬೌಂಡರಿಗಳು ಸುಲಭವಾಗಿ ಬಂದವು. ಆದರೆ, ನಮ್ಮ ಕೆಲವು ತಪ್ಪುಗಳಿಂದ ಪಂದ್ಯವು ನಮ್ಮ ಕೈ ಜಾರಿತು ಎಂದು ರಶೀದ್​ ತಿಳಿಸಿದರು.
ಮಧ್ಯಮ ಓವರ್‌ಗಳಲ್ಲಿ ಸತತವಾಗಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ನಾವು ಕೊನೆಯವರೆಗೂ ಆಕ್ರಮಣಶೀಲತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನದೇ ಆದ ಯೋಜನೆಯನ್ನು ಹೊಂದಿರುತ್ತಾನೆ. ಪಿಚ್ ಪರಿಸ್ಥಿತಿಗಳು ಮತ್ತು ತಂಡದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಆಡುವುದು ಮುಖ್ಯ. ಆದರೆ, ಕೆಲವೊಮ್ಮೆ ಫಲಿತಾಂಶ ವ್ಯತಿರಿಕ್ತವಾಗಿರುತ್ತದೆ. ಆದರೂ ಪರವಾಗಿಲ್ಲ ಏಕೆಂದರೆ, ಇದು ಟೂರ್ನಮೆಂಟ್‌ನ ಆರಂಭ ಮಾತ್ರ, ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಬಲವಾಗಿ ಮರಳುತ್ತೇವೆ ಎಂದು ರಶೀದ್ ತಿಳಿಸಿದರು.
ಕೊನೆಯ ಓವರ್‌ನಲ್ಲಿ ನಾವು (ರಬಾಡ ಜೊತೆ) ನಡೆಸಿದ ಒಂದೇ ಒಂದು ಸಂಭಾಷಣೆ ಎಂದರೆ, ನಮಗೆ ಕೇವಲ ಒಂದು ಬೌಂಡರಿ ಮಾತ್ರ ಬೇಕು ಎಂಬುವುದು. ಆದರೆ, ತುಷಾರ್ ದೇಶಪಾಂಡೆ ಕೆಲವು ಉತ್ತಮ ಯಾರ್ಕರ್‌ಗಳನ್ನು ಎಸೆದರು. ಅವರು ಎಸೆದ ಒಂದು ಎಸೆತವನ್ನು ಡಾಟ್​ ಮಾಡದೇ ಸಿಕ್ಸರ್‌ಗೆ ಹೊಡೆಯಬೇಕಿತ್ತು. ಆದರೆ, ಅದು ಆಗಲಿಲ್ಲ. ಇಂತಹ ಸಮಯದಲ್ಲಿ ಶಾಂತವಾಗಿರುವುದು ಮುಖ್ಯ. ಏಕೆಂದರೆ, ಇದು ದೀರ್ಘ ಪಂದ್ಯಾವಳಿ. ಈ ಸೋಲಿನಿಂದ ನಾವು ಪಾಠ ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಬಲವಾಗಿ ಬರುತ್ತವೆ. ನಮ್ಮ ನಿಯಮಿತ ನಾಯಕ ಗಿಲ್ ಮುಂದಿನ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ರಶೀದ್ ಖಾನ್ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net