ನನ್ನೇನೂ ಮೂರ್ಖ ಅನ್ಕೊಂಡಿದ್ಯಾ? ಧೋನಿಯ ಕೋಪಿಷ್ಠ ಮುಖ ನೋಡಿ ಹೆದರಿದ್ದ ಸ್ಟಾರ್​ ಬೌಲರ್​ ಓಪನ್​ ಟಾಕ್ | MS Dhoni ​

MS Dhoni ​
ನನ್ನೇನೂ ಮೂರ್ಖ ಅನ್ಕೊಂಡಿದ್ಯಾ? ಧೋನಿಯ ಕೋಪಿಷ್ಠ ಮುಖ ನೋಡಿ ಹೆದರಿದ್ದ ಸ್ಟಾರ್​ ಬೌಲರ್​ ಓಪನ್​ ಟಾಕ್ | MS Dhoni ​
Published on: 

MS Dhoni​: ಇತ್ತೀಚೆಗಷ್ಟೇ ಐಪಿಎಲ್​ ಫ್ಯಾನ್ಸ್​ಗೆ ಒಬ್ಬ ಆಟಗಾರನಾಗಿ ಸಿಂಪಲ್​ ಗುಡ್​ಬೈ ಹೇಳಿದ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, 'ಕ್ಯಾಪ್ಟನ್​ ಕೂಲ್' ಮಹೇಂದ್ರ ಸಿಂಗ್ ಧೋನಿ, 2027ರ ಐಪಿಎಲ್​ ಸೀಸನ್​ನಿಂದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ​ ಮೆಂಟರ್​ ಆಗಿ ಮೈದಾನಕ್ಕಿಳಿಯಲಿದ್ದಾರೆ. ಈ ಸುದ್ದಿ ಹೊರಬಿದ್ದಾಗಿನಿಂದಲೂ ಧೋನಿ ಕುರಿತು ಒಂದಲ್ಲ ಒಂದು ಕುತೂಹಲಕಾರಿ ವಿಷಯಗಳು ಹರಿದಾಡುತ್ತಲೇ ಇವೆ. ಇದೇ ಸಂದರ್ಭದಲ್ಲಿ, ಭಾರತದ ಸ್ಟಾರ್​ ಸ್ಪಿನ್ನರ್​ ಕುಲದೀಪ್​ ಯಾದವ್​ ಕೊಟ್ಟಿರುವ ಹೇಳಿಕೆ ಇದೀಗ ಕ್ರಿಕೆಟ್​ ಪ್ರಿಯರನ್ನು ಹೌದಾ? ಎನ್ನುವಂತೆ ಮಾಡಿದೆ. ​

ಬ್ಯಾಟರ್‌ಗಳ ವೀಕ್ನೆಸ್​

ಇಡೀ ಕ್ರಿಕೆಟ್​ ಲೋಕವೇ ಕಂಡ ಅತ್ಯಂತ ತಾಳ್ಮೆಯ ಕ್ಯಾಪ್ಟನ್​ ಧೋನಿ. ಹೀಗಾಗಿಯೇ, ಅವರಿಗೆ ಕ್ಯಾಪ್ಟನ್​ ಕೂಲ್​ ಎಂಬ ಪಟ್ಟ ಸಿಕ್ಕಿದೆ. ಪಂದ್ಯ ಎಷ್ಟೇ ರೋಚಕ, ಸವಾಲಿನ ಸ್ಥಿತಿಗೆ ತಲುಪಿದರೂ ತಾನೂ ಮಾತ್ರ ಕಿಂಚಿತ್ತು ಹೆದರಿಕೆ, ಆತಂಕ, ಕುತೂಹಲ, ಗೊಂದಲವನ್ನು ತೋರಿಸದೆ, ಅಷ್ಟೇ ಸಮಾಧಾನವಾಗಿ ಆಟವನ್ನು ಗೆಲುವುದು ಧೋನಿಯ ತಾಕತ್ತು. ಎದುರಾಳಿ ಬ್ಯಾಟರ್‌ಗಳ ವೀಕ್ನೆಸ್​ ಅನ್ನು ಸೂಕ್ಷ್ಮವಾಗಿ ಗುರುತಿಸಿ, ಬೌಲರ್‌ಗಳಿಗೆ ಹೀಗೆ ಬೌಲಿಂಗ್ ಮಾಡುವಂತೆ ಹೇಳಿಕೆ ವಿಕೆಟ್ ಪಡೆಯುವ ಚಾಣಕ್ಷತನ ಧೋನಿಗೆ ಮಾತ್ರ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.

ಇದೇ ಧೋನಿ ಹೇಳುವ ವಿಕೆಟ್​ ಕೀಳುವ ತಂತ್ರಗಾರಿಕೆಯನ್ನು ಪಾಲಿಸಲು ಎಡವಿದ್ರೆ, ಅವರ ಕೋಪದ ಕಟ್ಟೆ ಹೇಗೆ ಹೊಡೆಯುತ್ತಿತ್ತು ಎಂಬುದನ್ನು ಸ್ವತಃ ತಾವು ಅನುಭವಿಸಿದ್ದಾಗಿ ಕುಲದೀಪ್​ ಯಾದವ್​ ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಅದುವೇ, 2017ರಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಧೋನಿ ತಮ್ಮ ಮೇಲೆ ಕೋಪಗೊಂಡಿದ್ದ ಘಟನೆಯನ್ನು ಕುಲದೀಪ್​ ನೆನಪಿಸಿಕೊಂಡಿದ್ದಾರೆ.

ಧೋನಿ ವಿಶೇಷ ಫೀಲ್ಡಿಂಗ್ ಟೆಕ್ನಿಕ್

2017ರಲ್ಲಿ ಇಂದೋರ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಕುಲದೀಪ್ ಯಾದವ್ ಬೌಲಿಂಗ್ ಮಾಡುತ್ತಿದ್ದಾಗ ಶ್ರೀಲಂಕಾದ ಬ್ಯಾಟರ್ ಕುಸಾಲ್ ಪೆರೇರಾ ಕ್ರೀಸ್‌ನಲ್ಲಿದ್ದರು. ಈ ವೇಳೆ ವಿಕೆಟ್ ಪಡೆಯಲು ಧೋನಿ ವಿಶೇಷ ಫೀಲ್ಡಿಂಗ್ ಟೆಕ್ನಿಕ್​ ಅನ್ನು ಹೇಳಿದ್ದರು. ಪಾಯಿಂಟ್‌ನಲ್ಲಿದ್ದ ಫೀಲ್ಡರ್‌ನನ್ನು ಸ್ವಲ್ಪ ಮುಂದೆ ತರುವಂತೆ ಹಾಗೂ ಕವರ್‌ನಲ್ಲಿದ್ದ ಮತ್ತೊಬ್ಬ ಫೀಲ್ಡರ್‌ನನ್ನು ಬೌಂಡರಿ ಲೈನ್‌ಗೆ ಕಳುಹಿಸುವಂತೆ ತಿಳಿಸಿದ್ದರು. ಅಲ್ಲದೆ, ಆಫ್ ಸ್ಟಂಪ್‌ನ ಹೊರಭಾಗದಲ್ಲಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ನಿಂದ ಟಾಪ್ ಎಡ್ಜ್ ಹೊಡೆಸಬಹುದು ಎಂಬ ಪ್ಲ್ಯಾನ್​ ಅವರದ್ದಾಗಿತ್ತು ಎಂದರು.

Also Read
ದೇವರಿಗೆ ಮುಡಿಕೊಡುವ ಪ್ರವೃತ್ತಿ ಶುರುವಾಗಿದ್ದು ಹೇಗೆ ಗೊತ್ತಾ? ತಿಮ್ಮಪ್ಪನಿಗೆ ನೀವು ಅರ್ಪಿಸೋ ಕೂದಲಿಗಿದೆ ಸಖತ್​ ಡಿಮಾಂಡ್​ | Hair Offering
MS Dhoni ​

ಆದರೆ, ನಾನು ಅವರು ಹೇಳಿದಂತೆ ಮಾಡುವಲ್ಲಿ ಎಡವಿದೆ. ಇದರಿಂದ ಸಿಟ್ಟಿಗೆದ್ದ ಧೋನಿ ನೇರವಾಗಿ ನನ್ನ ಬಳಿ ಬಂದು, 'ನಾನು ಹೇಳಿದ್ದನ್ನು ನೀನೇಕೆ ಮಾಡ್ತಿಲ್ಲ? ನನ್ನನ್ನು ಏನು ಮೂರ್ಖ ಅಂದ್ಕೊಡಿದ್ದೀಯಾ? ನಾನೇನು 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿಲ್ವಾ?' ಎಂದು ಹೇಳಿದರು. ಧೋನಿ ಹೀಗೆ ಹೇಳ್ತಿದ್ದಂತೆ ಒಂದು ನಿಮಿಷ ನನಗೆ ಭಯವಾಗಿದ್ದಂತು ನಿಜ ಎಂದು ಹೇಳಿದ್ದಾರೆ.

ಇದಾದ ಬಳಿಕ ಧೋನಿ ಮತ್ತೊಮ್ಮೆ ಹೇಳಿ, ಫೀಲ್ಡಿಂಗ್ ಬದಲಾವಣೆ ಮಾಡಿದರು. ಅಂತೆಯೇ, ನಾನು ಆಫ್ ಸ್ಟಂಪ್‌ನ ಹೊರಭಾಗದಲ್ಲಿ ಎಸೆದ ಚೆಂಡನ್ನು ಎದುರಿಸಿದ ಕುಸಾಲ್ ಪೆರೇರಾ ಟಾಪ್ ಎಡ್ಜ್ ಹೊಡೆದರು. ಬೌಂಡರಿ ಬಳಿಯಿದ್ದ ಫೀಲ್ಡರ್ ಸುಲಭವಾಗಿ ಕ್ಯಾಚ್ ಹಿಡಿಯುತ್ತಿದ್ದಂತೆ ಪೆರೇರಾ ಪೆವಿಲಿಯನ್ ಸೇರಿದರು. ಧೋನಿ ಅವರ ಕ್ರಿಕೆಟ್ ಜ್ಞಾನ, ಪಂದ್ಯದ ಮೇಲಿನ ಹಿಡಿತ ಮತ್ತೊಮ್ಮೆ ಸಾಬೀತಾಯಿತು ಎಂದು ಕುಲದೀಪ್ ಹೇಳಿದ್ದಾರೆ,(ಏಜೆನ್ಸೀಸ್).