ಕಿವೀಸ್​ ಮಣ್ಣಿನಲ್ಲಿ 32 ವರ್ಷ ಬಳಿಕ ಇತಿಹಾಸ ಬರೆದ ಜೈಸ್ವಾಲ್-ರಾಹುಲ್ ಜೋಡಿ! ಮೊದಲ ವಿಕೆಟ್‌ಗೆ ಶತಕದ ಜತೆಯಾಟ | IND vs NZ Test

IND vs NZ Test
ಕಿವೀಸ್​ ಮಣ್ಣಿನಲ್ಲಿ 32 ವರ್ಷ ಬಳಿಕ ಇತಿಹಾಸ ಬರೆದ ಜೈಸ್ವಾಲ್-ರಾಹುಲ್ ಜೋಡಿ! ಮೊದಲ ವಿಕೆಟ್‌ಗೆ ಶತಕದ ಜತೆಯಾಟ | IND vs NZ Test
Published on: 

IND vs NZ Test: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಭರ್ಜರಿ ಓಪನಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಇಬ್ಬರೂ ಉತ್ತಮ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್‌ಗೆ ಶತಕದ ಜತೆಯಾಟ ಆಡಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆದಿದೆ.

ರಾಹುಲ್​ ಮತ್ತು ಜೈಸ್ವಾಲ್​ ಶತಕದಾಟದ ಅಮೋಘ ಪ್ರದರ್ಶನ, ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಆರಂಭಿಕರು 32 ವರ್ಷಗಳ ಬಳಿಕ ಈ ಸಾಧನೆ ಮಾಡಿದಂತಾಗಿದೆ. ಜೈಸ್ವಾಲ್ 89 ಎಸೆತಗಳಲ್ಲಿ, 16 ಬೌಂಡರಿ ಬಾರಿಸಿ 85 ರನ್ ಗಳಿಸಿ ಇನ್ನೇನು ಶತಕದತ್ತ ಮುನ್ನಡೆಯುತ್ತಿದ್ದ ಜೈಸ್ವಾಲ್​ರನ್ನು ಮ್ಯಾಟ್ ಹೆನ್ರಿ ಔಟ್ ಮಾಡಿದರು. ಇನ್ನೊಂದೆಡೆ, ಕೆ.ಎಲ್. ರಾಹುಲ್ ತಾಳ್ಮೆಯ ಆಟ ಪ್ರದರ್ಶಿಸಿ ಅರ್ಧಶತಕ ಬಾರಿಸಿದರು. 116 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ದೇವದತ್ ಪಡಿಕ್ಕಲ್ 16 ರನ್‌ನಿಂದ ರಾಹುಲ್‌ಗೆ ಸಾಥ್ ನೀಡಿದ್ದಾರೆ.

ಇದಕ್ಕೂ ಮೊದಲು 1994ರಲ್ಲಿ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಧು ಮತ್ತು ನಯನ್ ಮೊಂಗಿಯಾ ಜೋಡಿ ಮೊದಲ ವಿಕೆಟ್‌ಗೆ 102 ರನ್‌ಗಳ ಜತೆಯಾಟವಾಡಿತ್ತು. ಇದೀಗ ಜೈಸ್ವಾಲ್ ಮತ್ತು ರಾಹುಲ್ ಜೋಡಿ ಈ ಸಾಧನೆಯನ್ನು ಮತ್ತೆ ನೆನಪಿಸಿದ್ದು, 32 ವರ್ಷಗಳ ಬಳಿಕ ಟೀಮ್ ಇಂಡಿಯಾ ಪರ ಇಂತಹ ಅದ್ಭುತ ಜತೆಯಾಟದ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಕಿವೀಸ್​ ಪರ ನಿಕೋಲ್ಸ್-ಫಿಲಿಪ್ಸ್ ಶತಕದಾಟ!

ಇತ್ತ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಎರಡನೇ ದಿನದಾಟವನ್ನು ಹಿಂದಿನ ದಿನದ 243 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಸ್ಥಿತಿಯಿಂದ ಆರಂಭಿಸಿದ ಕಿವೀಸ್ ಆಟಗಾರರು ಮತ್ತಷ್ಟು ರನ್ ಕಲೆಹಾಕಿದರು. ಗ್ಲೆನ್ ಫಿಲಿಪ್ಸ್ 118 ರನ್‌ಗಳ ಶತಕದ ಇನಿಂಗ್ಸ್ ಆಡಿದರು. ಹೆನ್ರಿ ನಿಕೋಲ್ಸ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 335 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದರು. ಇವರ ಇನಿಂಗ್ಸ್‌ನಲ್ಲಿ 21 ಬೌಂಡರಿಗಳು ಸೇರಿತು. ಆರನೇ ವಿಕೆಟ್‌ಗೆ ಈ ಇಬ್ಬರೂ 216 ರನ್‌ಗಳ ಮಹತ್ವದ ಜತೆಯಾಟ ಆಡಿದರು.

Also Read
ಜಮೀನು ಮಾರಿ ಬೀದಿಗೆ ಬಂದಿದ್ದ ತಂದೆಗೆ ಕೊನೆಗೂ ಕೈಹಿಡಿದ ಪುತ್ರರು! ಅಪ್ಪನ ಆಸೆ, ಹೆಸರುಳಿಸಿದ ಅಣ್ಣ-ತಮ್ಮನ ಯಶೋಗಾಥೆಗೆ ನೆಟ್ಟಿಗರು ಸಲಾಂ
IND vs NZ Test

ಮೊದಲ ಟೆಸ್ಟ್​ನ ಎರಡನೇ ದಿನದಾಟದ ಅಂತ್ಯಕ್ಕೆ ಎರಡೂ ತಂಡಗಳ ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚಿರುವುದರಿಂದ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದೆ. ಜೈಸ್ವಾಲ್ ಮತ್ತು ರಾಹುಲ್ ಅವರ ಉತ್ತಮ ಜತೆಯಾಟ ಭಾರತಕ್ಕೆ ಆತ್ಮವಿಶ್ವಾಸ ನೀಡಿದ್ದು, ಮುಂದಿನ ಇನಿಂಗ್ಸ್‌ಗಳಲ್ಲಿ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).