ಹೋಪ್, ರುದರ್‌ಫೋರ್ಡ್ ಅಬ್ಬರ: ವಿಂಡೀಸ್​ಗೆ ಐತಿಹಾಸಿಕ ಜಯ..ಟೀಮ್​ ಇಂಡಿಯಾಗೆ ಭಾರಿ ಮುಖಭಂಗ! | INDvWI

INDvWI: ರಾಂಚಿಯ ಜೆಎಸ್‌ಕೆಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದೆ. ನಾಯಕ ಶಾಯ್ ಹೋಪ್ ಅವರ ಸ್ಫೋಟಕ ಶತಕ ಹಾಗೂ ಶೆರ್ಫೇನ್ ರುದರ್‌ಫೋರ್ಡ್ ವಿಧ್ವಂಸಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡವು ಭಾರತ ನೀಡಿದ್ದ ಬೃಹತ್ ಗುರಿಯನ್ನು ಅನಾಯಾಸವಾಗಿ ಬೆನ್ನಟ್ಟಿ, 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ವಿಂಡೀಸ್​ಗೆ ಐತಿಹಾಸಿಕ ಜಯ..ಟೀಮ್​ ಇಂಡಿಯಾಗೆ ಭಾರಿ ಮುಖಭಂಗ!
ವಿಂಡೀಸ್​ಗೆ ಐತಿಹಾಸಿಕ ಜಯ..ಟೀಮ್​ ಇಂಡಿಯಾಗೆ ಭಾರಿ ಮುಖಭಂಗ!
Published on: 

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಪ್ರವಾಸಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್, ಇಶಾನ್​ ಕಿಶಾನ್​ ಸಿಡಿಲಬ್ಬರದ ಬ್ಯಾಟಿಂಗ್‌, ಅಂತಿಮ ಓವರ್​ಗಳಲ್ಲಿ ತಿಲಕ್ ವರ್ಮ ಮತ್ತು ಶ್ರೇಯಸ್ ಐಯ್ಯರ್ ಅತ್ಯಮೂಲ್ಯ ಕೊಡುಗೆಯಿಂದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬೃಹತ್ 249 ರನ್‌ಗಳ ರಾಶಿ ಹಾಕಿತು. ಮೊದಲ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಭಾರತ ತಂಡವು ಗೆಲುವಿನ ದಡ ತಲುಪುವುದು ಖಚಿತ ಎಂದೇ ಎಲ್ಲರೂ ಭಾವಿಸಿದ್ದರು.

Also Read
ಟೀಮ್​ ಇಂಡಿಯಾಗೆ ಸಂಜು ತಿಲಕದ ಶ್ರೇಯಸ್ಸು: ಕೆರೆಬಿಯನ್ನರಿಗೆ ಬಿಗ್​ ಟಾರ್ಗೆಟ್! | INDvWI
ವಿಂಡೀಸ್​ಗೆ ಐತಿಹಾಸಿಕ ಜಯ..ಟೀಮ್​ ಇಂಡಿಯಾಗೆ ಭಾರಿ ಮುಖಭಂಗ!

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಕೆರಿಬಿಯನ್ನರು

250 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಯಿತು. ಭಾರತದ ಯುವ ವೇಗಿ ಮಯಾಂಕ್ ಯಾದವ್ ತಮ್ಮ ಮಾರಕ ದಾಳಿಯ ಮೂಲಕ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಪ್ರವಾಸಿ ತಂಡವನ್ನು ಆರಂಭಿಕ ಸಂಕಷ್ಟಕ್ಕೆ ಸಿಲುಕಿಸಿದರು. ವಿಂಡೀಸ್ ಕೇವಲ 5 ರನ್‌ಗಳಿಗೆ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತತ್ತರಿಸಿತು. ಪವರ್‌ಪ್ಲೇ ಅಂತ್ಯದ ವೇಳೆಗೆ ಪೊವೆಲ್ ಕೂಡ ಔಟಾಗುವುದರೊಂದಿಗೆ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು.

ಹೋಪ್ ಮತ್ತು ರುದರ್‌ಫೋರ್ಡ್ ಅಬ್ಬರ

ಆರಂಭಿಕ ಕುಸಿತದ ಬಳಿಕ ಕ್ರೀಸ್‌ಗೆ ಬಂದ ನಾಯಕ ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಭಾರತೀಯ ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದರು. ಶಾಯ್ ಹೋಪ್ ಕೇವಲ 45 ಎಸೆತಗಳಲ್ಲಿ ಅಜೇಯ 102 ರನ್‌ಗಳ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಶೆರ್ಫೇನ್ ರುದರ್‌ಫೋರ್ಡ್ ಕೇವಲ 37 ಎಸೆತಗಳಲ್ಲಿ 84 ರನ್‌ ಬಾರಿಸಿದರು. ಈ ಜೋಡಿಯು ಟೀಮ್​ ಇಂಡಿಯಾ ಬೌಲರ್‌ಗಳ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ, ಕೆರಿಬಿಯನ್ನರು 18.3 ಓವರ್‌ಗಳಲ್ಲಿಯೇ 4 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಗುರಿ ತಲುಪಿತು. ಈ ಮೂಲಕ ವಿಂಡೀಸ್​ ಟಿ20 ಕ್ರಿಕೆಟ್ ಇತಿಹಾಸದ ಎರಡನೇ ಅತ್ಯಂತ ದೊಡ್ಡ ಗುರಿ ಬೆನ್ನತ್ತಿದ ದಾಖಲೆ ಬರೆಯಿತು(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net