ಗಂಭೀರ್‌ಗೆ ಅಲ್ಲಿ ಏನೂ ಕೆಲಸವಿಲ್ಲ: ಅವನ ಯಾವ ನಿರ್ಧಾರವನ್ನು ನಂಬಲಾಗಲ್ಲ; ಟೀಂ ಇಂಡಿಯಾ ಕೋಚ್ ವಿರುದ್ಧ ಶ್ರೀಕಾಂತ್​ ಗರಂ! Srikkanth on Gautam Gambhir

ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಗೆ ಶ್ರೀಕಾಂತ್​ ಗರಂ
ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಗೆ ಶ್ರೀಕಾಂತ್​ ಗರಂ
Published on

ಪ್ರಮುಖ ಮುಖ್ಯಾಂಶಗಳು

  • ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಗೆ ಶ್ರೀಕಾಂತ್​ ಗರಂ
  • ಶ್ರೀಲಂಕಾ ದುರ್ಬಲ ತಂಡ; ಅವರೊಟ್ಟಿಗಿನ ಪಂದ್ಯಕ್ಕೆ ಗಂಭೀರ್​ ಅಗತ್ಯವಿಲ್ಲ ಎಂದ ಕ್ರಿಸ್​ ಶ್ರೀಕಾಂತ್​
  • ತಂಡದವರ ಜೊತೆ ಉತ್ತಮ ಸಂವನ ನಡೆಸಿದರೆ ಯಾವುದೇ ಬಿಕ್ಕಟ್ಟು ಎದುರಾಗಲ್ಲ ಎಂದ ಮಾಜಿ ಆಟಗಾರ
ನವದೆಹಲಿ: ಒಂದು ಸಮಯದಲ್ಲಿ ಟೆಸ್ಟ್​ ಕ್ರಿಕೆಟ್​ನ ಅಧಿಪತಿಗಳಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ, ಇತ್ತೀಚೆಗೆ ಶ್ರೀಲಂಕಾ ಜೊತೆಗಿನ ಪಂದ್ಯವೊಂದನ್ನು ಹೊರತುಪಡಿಸಿ ಬೇರಾವ ತಂಡಗಳ ಮೇಲೆ ಅಭೂತಪೂರ್ವ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿಲ್ಲ.
ಇದರ ಹಿನ್ನಲೆಯಲ್ಲಿಯೇ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ಗೌತಮ್​ ಗಂಭೀರ್​ ಸಾಕಷ್ಟು ಟೀಕೆ-ಟಿಪ್ಪಣಿಗಳನ್ನು ಎದುರಿಸುತ್ತಿದ್ದಾರೆ. ಈದೀಗ ಭಾರತ ತಂಡದ ಮಾಜಿ ನಾಯಕ ಕ್ರಿಸ್​ ಶ್ರೀಕಾಂತ್ (Srikkanth on Gautam Gambhir)​, ಗಂಭೀರ್​ ವಿರುದ್ಧ ಕಠಿಣ ಪದಗಳನ್ನು ಪ್ರಯೋಗಿಸಿದ್ದಾರೆ.

ಅವನಿಗೆ ಅಲ್ಲಿ ಏನೂ ಕೆಲಸವಿಲ್ಲ!

ಶ್ರೀಲಂಕಾ ವಿರುದ್ಧದ ಟೆಸ್ಟ್​ ಟೂರ್ನಿ ಬಗ್ಗೆ ಮಾತನಾಡುತ್ತಾ ಹಿರಿಯ ಆಟಗಾರ ಶ್ರೀಕಾಂತ್, ಶ್ರೀಲಂಕಾ ತಂಡ ತುಂಬಾ ಬಲಹೀನವಾಗಿದೆ, ಹೀಗಾಗಿ ಟೀಂ ಇಂಡಿಯಾ ಖಂಡಿತವಾಗಿ ಜಯಭೇರಿಯನ್ನು ಬಾರಿಸುತ್ತದೆ. ಗೌತಮ್​ ಗಂಭೀರ್​ ಶ್ರೀಲಂಕಾಗೆ ಹೋಗಿರಬೇಕಾದ ಯಾವುದೇ ಅವಶ್ಯಕತೆಯೇ ಇಲ್ಲ, ಅಲ್ಲಿ ಅವನಿಗೆ ಏನೂ ಕೆಲಸವೇ ಇಲ್ಲ ಎಂದಿದ್ದಾರೆ.

ಹಾಗೆಯೇ ಗಂಭೀರ್​ ಬಗ್ಗೆ ಮಾತನಾಡುತ್ತಾ, ಆದರೆ ಗಂಭೀರ್​ನ ನಿರ್ಧಾರವನ್ನೇ ನಂಬಲು, ಒಪ್ಪಲು ಸಾಧ್ಯವಾಗುವುದಿಲ್ಲ. ಮೊದಲ ಟೆಸ್ಟ್​ನಲ್ಲಿ 200 ಕ್ಕೂ ಅಧಿಕ ರನ್​ಗಳಿಸಿರುವ ದೇವದತ್ ಪಡಿಕ್ಕಲ್​ನು ಮುಂದಿನ ಪಂದ್ಯದಿಂದ ಹೊರಗಿಟ್ಟರೆ ಆಶ್ಚರ್ಯ ಪಡಬೇಕಿಲ್ಲ.


ಆದರೆ, ಈ ಶ್ರೀಲಂಕಾ, ಅಫಘಾನಿಸ್ತಾದ ಬದಲು ಬಲಿಷ್ಠ ತಂಡಗಳ ವಿರುದ್ಧ ನಮ್ಮವರು ಗೆಲ್ಲಬೇಕು, ಗೆಲ್ಲುವಂತ ತಂಡ ನಮ್ಮ ಬಳಿ ಇರಬೇಕು ಎಂದಿದ್ದಾರೆ. ಟೆಸ್ಟ್​ ಕ್ರಿಕೆಟ್​ನಿಂದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಹಾಗೂ ಆರ್​. ಅಶ್ವಿನ್​ ನಿವೃತ್ತಿ ಘೋಷಿಸಿದ ನಂತರ, ತಂಡದಲ್ಲಿ ಬಲಹೀನತೆ ಎದ್ದುಕಾಣುತ್ತಿದ್ದು, ಹೊಸ ತಂಡವನ್ನು ಕಟ್ಟುವತ್ತ ಬಿಸಿಸಿಐ ಪ್ರಯತ್ನಶೀಲವಾಗಿರುವ ಸಂದರ್ಭದಲ್ಲಿ ಶ್ರೀಕಾಂತ್​ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.

ಅವನೊಬ್ಬ ಉತ್ತಮ ಆಟಗಾರ!

ಹಾಗೆಯೇ, ಗೌತಮ್​ ಗಂಭೀರ್ ಬಗ್ಗೆ ಹೊಗಳಿ ಮಾತನಾಡಿರುವ ಶ್ರೀಕಾಂತ್​, ನಾನು ಗಂಭೀರ್​ನನ್ನು ಟೀಕಿಸುತ್ತಿದ್ದ, ಬದಲಾಗಿ ತಪ್ಪುಗಳನ್ನು ಸರಿಮಾಡಿಕೊಳ್ಳುವಂತೆ ಹೇಳುತ್ತಿದ್ದೆನೆ.

ಗಂಭೀರ್​ವೊಬ್ಬ ಉತ್ತರ ಬ್ಯಾಟ್ಸಮನ್​ ಹಾಗೂ ಅವನಿಗೆ ಕ್ರಿಕೆಟ್​​ನ್ನು ಓದುವ ಕಲೆ ಸಿದ್ದಿಯಾಗಿದೆ. ಆದರೆ ಆಟಗಾರರೊಂದಿಗೆ ತನ್ನ ಸಂವಹನ ಕಲೆ ಎಷ್ಟರ ಮಟ್ಟಿಗೆಯಿದೆ? ತನ್ನ ಕೋಚಿಂಗ್​ಗೆ ಆಟಗಾರರು ಒಗ್ಗಿಕೊಳ್ಳುತ್ತಿದ್ದಾರೆಯೇ? ಎಂಬುದಕ್ಕೆ ಉತ್ತರ ಹುಡುಕಬೇಕು. ನನಗೆ ತಿಳಿದಂತೆ ತಂಡದ ಪ್ರತಿ ಆಟಗಾರರೊಂದಿಗೆ ಸರಿಯಾದ ಸಂವಹನ ನಡೆಸಿದರೆ ಬಿಕ್ಕಟ್ಟಿಗೆ ಜಾಗವೇ ಇರುವುದಿಲ್ಲ ಎಂದು ಶ್ರೀಕಾಂತ್​ ಸಲಹೆ ನೀಡಿದ್ದಾರೆ, (ಏಜನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net