

ವೃಂದಾವನ್: ಪ್ರೀತಿ, ಕರುಣೆ, ಮಮಕಾರ ಮೊದಲಾದ ಮಾನವ ಸಂಬಂಧಿ ಸಂಗತಿಗಳ ಬಗ್ಗೆ ಪ್ರವಚನ ನೀಡುತ್ತಾ, ಎರಡು ಕಿಡ್ನಿಗಳನ್ನು ಕಳೆದುಕೊಂಡಿದ್ದರೂ, ಪವಾಡ ಸದೃಶ್ಯವಾಗಿ ಬದುಕಿರುವ ವೃಂದಾವನದ ಪ್ರೇಮಾನಂದ ಮಹಾರಾಜರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.
ಪ್ರೇಮಾನಂದ ಮಹಾರಾಜರ ಖ್ಯಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಸಿದ್ಧ ಕ್ರಿಕೆಟ್ ಆಟಗಾರ, ವಿರಾಟ್ ಕೊಹ್ಲಿಗೆ 5 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಎನ್ನುವವರು ಗಂಭೀರ ಸ್ವರೂಪದ ಆರೋಪವನ್ನು ಮಾಡಿದ್ದಾರೆ.
ಆದರೆ, ಈ ಆರೋಪಕ್ಕೆ, ವಿರಾಟ್ ಕೊಹ್ಲಿ ಅವರ ವಕ್ತಾರ, ಇದೊಂದು ಆಧಾರಹಿತ ಆರೋಪವಾಗಿದೆ. ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಪ್ರೇಮಾನಂದ ಮಹಾರಾಜರ ಮೇಲೆ ಹೊಂದಿರುವ ಗೌರವ, ಭಕ್ತಿ ಹಾಗೂ ನಂಬಿಕೆಯ ಆಧಾರದಲ್ಲಿ ಬೇಟಿ ನೀಡಿದ್ದಾರೆ. ಇದರ ಹಿಂದೆ ಯಾವುದೇ ವ್ಯವಹಾರವಿಲ್ಲ. ಯಾರೂ ಈ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ನೀಡಿದ್ದರು.
ವಿರಾಟ್ ಕೊಹ್ಲಿ ಅವರ ವಕ್ತಾರ, ಇದೊಂದು ಆಧಾರರಹಿತ ಆರೋಪ, ಇದು ಕೇವಲ ಒಂದು ವದಂತಿ ಎಂದು ಹೇಳಿದ್ದಕ್ಕೆ, ದಿನೇಶ್ ಫಲಹಾರಿ ಮಹಾರಾಜ್ ಮತ್ತೊಮ್ಮೆ ಕೌಂಟರ್ ಕೊಟ್ಟಿದ್ದು, ಹೋಗಿ ಬ್ಯಾಂಕ್ ಅಕೌಂಟ್ ಚೆಕ್ ಮಾಡಿ, ದುಡ್ಡಿ ಬಂದಿದಿಯೋ? ಇಲ್ಲವೋ? ಎನ್ನವುದು ಬಯಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಮಾತನ್ನು ಮುಂದುವರಿಸಿದ ಫಲಹಾರಿ ಮಹಾರಾಜ್, ಇದೊಂದು ಪಿಆರ್ ತಂತ್ರವಾಗಿದ್ದು, ಇದನ್ನು ಪ್ರೇಮಾನಂದ ಮಹಾರಾಜರ ಪಿಆರ್ಗಳು, ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿ, ಬಾಬಾ ರ ದರ್ಶನಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಅಂತೆಯೇ 5 ಕೋಟಿ ಹಣವನ್ನು ನೀಡುವುದಾಗಿ ಹೇಳಿದ್ದು, ಅದರಂತೆ 2 ಕೋಟಿ ರೂಪಾಯಿ ಚೆಕ್ ನೀಡಿದರೆ, 3 ಕೋಟಿಯನ್ನು ಕೊಹ್ಲಿ ಅವರ ದೆಹಲಿಯ ನಿವಾಸಕ್ಕೆ ಕ್ಯಾಶ್ ಕಳುಹಿಸಿದ್ದಾರೆಂದು ಹೇಳಿದ್ದಾರೆ.
ಪ್ರೇಮಾನಂದ ಮಹರಾಜ್ರನ್ನು ಭೇಟಿ ಮಾಡಲು ವಿರಾಟ್ ಕೊಹ್ಲಿ ಹಣ ಪಡೆದಿದ್ದಾರೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಆರೋಪ, ಪ್ರೇಮಾನಂದರ ಭಕ್ತವೃಂಧದ ಕೋಪಕ್ಕೆ ಕಾರಣವಾಗಿದೆ. ದಿನೇಶ್ ಫಲಹಾರಿ ಮಹಾರಾಜ್ ಅವರು ಹೀಗೆ ಸುಖಾಸುಮ್ಮನೆ ಆರೋಪ ಮಾಡಬಾರದು. ಇದರಿಂದ ಮಹಾರಾಜರ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ.
ಹೀಗಾಗಿ, ಈ ದಿನೇಶ್ ಫಲಹಾರಿ ಮಹಾರಾಜ್ ಅವರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು. ಅವರು ಮಾಡಿರುವ ಆರೋಪ ಸುಳ್ಳಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿ ಪ್ರೇಮಾನಂದ್ ಮಹಾರಾಜರ ಭಕ್ತರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).