15 ವರ್ಷದ ವೈಭವ್, 19ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸರ್, ಬೌಂಡರಿಗಳನ್ನು ಹರಿಸಿದರು. ಸಿಎಸ್ಕೆ ವಿರುದ್ಧ ಕೇವಲ 15 ಎಸೆತಗಳಲ್ಲಿ 52 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ವೇಗದ ಅರ್ಧಶತಕ ದಾಖಲಿಸಿದ ಆಟಗಾರ ಎಂಬ ದಾಖಲೆಗೆ ವೈಭವ್ ಸಾಕ್ಷಿಯಾದರು. ಐದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿ, ಕ್ರಿಕೆಟ್ ಪ್ರಿಯರ ಗಮನ ಸೆಳೆದ ವೈಭವ್, ತಮ್ಮ ಪವರ್ಹಿಟ್ಟಿಂಗ್ಗೆ ಆ ಸ್ವೀಟ್ ಕಾರಣ ಎಂದು ಹೇಳಿದ್ದಾರೆ.