

ಇಂದೋರ್: ಭಾರತದ ಅನುಪಮಾ ರಾಮಚಂದ್ರನ್ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ತಮಿಳುನಾಡಿನ ಅನುಪಮಾ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ನ ಅನುಭವಿ ಆಟಗಾರ್ತಿ ಸೊ ಮಾನ್ ಯಾನ್ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿದರು.
ಈ ಮೂಲಕ ಅವರು ಸತತ 2 ಬಾರಿ ಈ ಪ್ರಶಸ್ತಿ ಜಯಿಸಿದ ಮೊದಲ ಭಾರತೀಯರೆನಿಸಿದರು. 24 ವರ್ಷದ ಅನುಪಮಾ ಗೆಲುವಿನೊಂದಿಗೆ 3.70 ಲಕ್ಷ ರೂ. ಬಹುಮಾನ ಗಳಿಸಿದರು.
ಪುರುಷರ ವಿಭಾಗದಲ್ಲಿ 3 ಬಾರಿಯ ಚಾಂಪಿಯನ್ ಭಾರತದ ಪಂಕಜ್ ಆಡ್ವಾಣಿ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿದರು. ಇದರಿಂದ 30ನೇ ವಿಶ್ವ ಕಿರೀಟದಿಂದ ವಂಚಿತರಾದರು. ಅವರಿಗೆ ಸೋಲುಣಿಸಿದ ಇರಾನ್ನ ಅಲಿ ರಾಹ್ಗೋಜ್ಲೋ ಫೈನಲ್ಗೇರಿ ಪ್ರಶಸ್ತಿ ಜಯಿಸಿದರು. ಬೆಂಗಳೂರಿನ ಪಂಕಜ್ ಆಡ್ವಾಣಿ ಕಂಚಿಗೆ ತೃಪ್ತಿಪಟ್ಟರು.