ಇಂದಿನಿಂದ ಎಮರ್ಜಿಂಗ್ ಏಷ್ಯಾಕಪ್ ಟಿ20: ನಾಳೆ ಭಾರತ-ಪಾಕ್ ಮುಖಾಮುಖಿ

New-Project-3-3
Published on

ಮಸ್ಕತ್: ಉದಯೋನ್ಮುಖ ಕ್ರಿಕೆಟಿಗರ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಎ ಹಾಗೂ ಹಾಂಕಾಂಗ್ ತಂಡಗಳು ಮುಖಾಮುಖಿ ಆಗಲಿವೆ. ಹಾಲಿ ರನ್ನರ್ ಅಪ್ ಭಾರತ ತಂಡ ಶನಿವಾರ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಅ.18ರಿಂದ 27ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಎ, ಪಾಕಿಸ್ತಾನ ಎ, ಯುಎಇ ಹಾಗೂ ಆತಿಥೇಯ ಓಮನ್ ತಂಡಗಳಿದ್ದು, ಬಿ ಗುಂಪಿನಲ್ಲಿ ಅ್ಘಾನಿಸ್ತಾನ ಎ, ಬಾಂಗ್ಲಾದೇಶ ಎ, ಹಾಂಕಾಂಗ್, ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಉಪಾಂತ್ಯಕ್ಕೇರಲಿದ್ದು, 25ರಂದು ಸೆಮಿೈನಲ್ಸ್ ಹಾಗೂ 27ಕ್ಕೆ ೈನಲ್ ಪಂದ್ಯ ನಿಗದಿಯಾಗಿದೆ. ಭಾರತ ಎ ತಂಡವನ್ನು ಎಡಗೈ ಬ್ಯಾಟರ್ ತಿಲಕ್ ವರ್ಮ ಮುನ್ನಡೆಸಲಿದ್ದು, ಅಭಿಷೇಕ್ ಶರ್ಮ, ವೈಭವ್ ಆರೋರ ಪ್ರಮುಖ ಆಟಗಾರರೆನಿಸಿದ್ದಾರೆ. ಭಾರತ ತಂಡ ಅ.19 ರಂದು ಪಾಕಿಸ್ತಾನ ವಿರುದ್ಧ ಪಂದ್ಯದ ಬಳಿಕ ಯುಎಇ (ಅ.21), ಓಮನ್ (ಅ.23) ತಂಡಗಳನ್ನು ಎದುರಿಸಲಿದೆ. ಎಲ್ಲ ಪಂದ್ಯಗಳು ್ಯಾನ್ ಕೋಡ್ ಆ್ಯಪ್‌ನಲ್ಲಿ ನೇರಪ್ರಸಾರ ಕಾಣಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net