ನಾಳೆಯಿಂದ ಸಿಲಿಕಾನ್‌ ಸಿಟಿಯಲ್ಲಿ ಬಾಸ್ಕೆಟ್‌ಬಾಲ್‌ ಹಬ್ಬ

ಪ್ರತಿಷ್ಠಿತ ಫಿಬಾ WBL ಏಷ್ಯಾ 2026 ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಸಜ್ಜು; ಏಷ್ಯಾದ ಆಗ್ರ ಆರು ಕ್ಲಬ್‌‌ ತಂಡಗಳಿಂದ ಪೈಪೋಟಿ
basketball
ಭಾರತೀಯ ರೈಲ್ವೇಸ್​ ಆಟಗಾರ್ತಿಯರ ಅಭ್ಯಾಸಏಜೆನ್ಸಿ
Published on: 

ಬೆಂಗಳೂರು: ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್‌ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರತಿಷ್ಠಿತ ಮಹಿಳಾ ಬಾಸ್ಕೆಟ್‌ಬಾಲ್‌ ಲೀಗ್‌ ಏಷ್ಯಾ-2026 ಟೂರ್ನಿಗೆ ಮಂಗಳವಾರ ಚಾಲನೆ ಸಿಗಲಿದೆ. ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್‌ (ಫಿಬಾ) ಹಾಗೂ ಫಿಬಾ ಏಷ್ಯಾ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಏಷ್ಯಾದ ಮಹಿಳಾ ವೃತ್ತಿಪರ ಬಾಸ್ಕೆಟ್‌ಬಾಲ್‌ನ ಅಗ್ರ ಕ್ಲಬ್‌ ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೀನಾದ ಸಿಚುವಾನ್‌ ಯುಯಾಂದ ಮೀಲೆ ಹಾಗೂ ಚೈನೀಸ್‌ ತೈಪೆಯ ಕ್ಯಾಥೆ ಲೈಫ್‌ ಟೈಗರ್ಸ್‌ ತಂಡಗಳು ಎದುರಾಗಲಿವೆ.

ಅಗ್ರ 6 ಕ್ಲಬ್‌ ತಂಡಗಳು ಭಾಗಿ

ಅಗ್ರ ತಂಡಗಳಾದ ಸಿಚುವಾನ್‌ ಯುಯಾಂದ ಮೀಲೆ (ಚೀನಾ), ಡೆನ್ಸೊ ಐರಿಸ್‌ (ಜಪಾನ್‌), ಕೆ.ಬಿ.ಸ್ಟಾರ್ಸ್‌ (ಕೊರಿಯಾ), ಕ್ಯಾಥೆ ಲೈಫ್‌ ಟೈಗರ್ಸ್‌ (ಚೈನೀಸ್‌ ತೈಪೆ), ಅಕಾರಿ ಸ್ಪಾರ್ಕ್ಸ್‌ (ಫಿಲಿಫೈನ್ಸ್‌) ಹಾಗೂ ಭಾರತದ ಚಾಂಪಿಯನ್‌ ಕ್ಲಬ್‌ ತಂಡ ಭಾರತೀಯ ರೈಲ್ವೇಸ್‌ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಚೈನೀಸ್‌ ತೈಪೆಯ ಕ್ಯಾಥೆ ಲೈಫ್‌ ಟೈಗರ್ಸ್‌ ಸತತ ಮೂರನೇ ಆವೃತ್ತಿಯಲ್ಲಿ ಆಡುತ್ತಿರುವ ಏಕೈಕ ಕ್ಲಬ್‌ ಎನಿಸಿಕೊಂಡಿದೆ. ತಲಾ 3 ತಂಡಗಳಂತೆ ಎರಡು ಗುಂಪು ರಚಿಸಲಾಗಿದೆ. ಸಿಚುವಾನ್‌ ಯುಯಾಂದ ಮೀಲೆ, ಅಕಾರಿ ಸ್ಪಾರ್ಕ್ಸ್‌ ಹಾಗೂ ಕ್ಯಾಥೆ ಲೈಫ್‌ ಟೈಗರ್ಸ್‌ ತಂಡಗಳು ಎ ಗುಂಪಿನಲ್ಲಿದ್ದರೆ, ಡೆನ್ಸೊ ಐರಿಸ್‌, ಕೆ.ಬಿ.ಸ್ಟಾರ್ಸ್‌ ಹಾಗೂ ಭಾರತೀಯ ರೈಲ್ವೇಸ್‌ ಒಳಗೊಂಡ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಕ್ಟೋಬರ್‌ 20, 21 ಮತ್ತು 22 ರಂದು ಗುಂಪಿನ ಹಂತದ ಪಂದ್ಯಗಳು ನಡೆದರೆ, ಅಕ್ಟೋಬರ್‌ 23 ವಿಶ್ರಾಂತಿ ದಿನವಾಗಿದೆ. ಅಕ್ಟೋಬರ್‌ 24 ರಂದು ಕ್ಲಾಸಿಫಿಕೇಷನ್‌ ಹಾಗೂ ಸೆಮಿಫೈನಲ್‌ ಪಂದ್ಯಗಳು ನಡೆದರೆ, ಅಕ್ಟೋಬರ್‌ ರಂದು 3ನೇ ಸ್ಥಾನಕ್ಕಾಗಿ ಹಾಗೂ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.

ಮಂಗಳವಾರ ನಡೆಯಲಿರುವ ಪಂದ್ಯಗಳು

ಮೊದಲ ಪಂದ್ಯ: ಸಿಚುವಾನ್‌ ಯುಯಾಂದ ಮೀಲೆ (ಚೀನಾ) - ಕ್ಯಾಥೆ ಲೈಫ್‌ ಟೈಗರ್ಸ್‌ (ಚೈನೀಸ್‌ ತೈಪೆ)

ಪಂದ್ಯ ಆರಂಭ: ಸಂಜೆ 4

ಎರಡನೇ ಪಂದ್ಯ: ಡೆನ್ಸೊ ಐರಿಸ್‌ (ಜಪಾನ್‌) - ಭಾರತೀಯ ರೈಲ್ವೇಸ್‌

ಪಂದ್ಯ ಆರಂಭ: ರಾತ್ರಿ 7

ಸ್ಥಳ: ಕಂಠೀರವ ಒಳಾಂಗಣ ಸ್ಟೇಡಿಯಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net