29ರಿಂದ 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಆರಂಭ

New Project
Published on

ದೆಹಲಿ: ಭಾರತೀಯ ಟೆನಿಸ್ ಪ್ರತಿಭೆಯನ್ನು ಪೋಷಿಸುವ 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 29ರಿಂದ ದೆಹಲಿಯ ಡಿ.ಎಲ್.ಟಿ.ಎ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಡಿ.ಸಿ.ಎಂ ಶ್ರೀರಾಮ್ ಲಿಮಿಟೆಡ್ ಸಹಯೋಗದಲ್ಲಿ, ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (AITA) ಮತ್ತು ದೆಹಲಿ ಲಾನ್ ಟೆನಿಸ್ ಅಸೋಸಿಯೇಶನ್ (DLTA) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್, ಭಾರತದ ಅತಿ ದೊಡ್ಡ ದೇಶೀಯ ಟೆನ್ನಿಸ್ ಚಾಂಪಿಯನ್‌ಶಿಪ್ ಆಗಿದ್ದು, ದೇಶದ ಮೂಲೆಮೂಲೆಗಳಿಂದ ಶ್ರೇಷ್ಠ ಆಟಗಾರರನ್ನು ಆಕರ್ಷಿಸುತ್ತದೆ.

ಪುರುಷರು, ಮಹಿಳೆಯರು, ಹಾಗೂ ಯು–18/ಯು–16/ಯು–14 (ಬಾಲಕರು ಮತ್ತು ಬಾಲಕಿಯರು) ವಿಭಾಗಗಳನ್ನು ಒಳಗೊಂಡ ಏಕೈಕ ಸಮಗ್ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿರುವ ಫೆನೆಸ್ಟಾ ಓಪನ್, ವರ್ಷಗಳಿಂದ ರೋಹನ್ ಬೋಪಣ್ಣ, ಸೊಮದೇವ್ ದೇವ್ವರ್ಮನ್, ಯುಕಿ ಭಾಂಬ್ರಿ, ಸಾನಿಯಾ ಮಿರ್ಜಾ, ರುತುಜಾ ಭೋಸಲೆ ಮೊದಲಾದ ಭಾರತೀಯರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ.

ಡಿ.ಸಿ.ಎಂ ಶ್ರೀರಾಮ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಜಯ್ ಎಸ್ ಶ್ರೀರಾಮ್ ಹಾಗೂ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕ್ರಂ ಶ್ರೀರಾಮ್ ಮಾತನಾಡಿ 'ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್‌ನ 30ನೇ ಆವೃತ್ತಿಯನ್ನು ಆಚರಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಭಾರತೀಯ ಟೆನಿಸ್‌ಗೆ ಇದು ಶಾಶ್ವತ ವೇದಿಕೆ. ನಾವು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಅವಕಾಶವನ್ನು ಒದಗಿಸಿ, ರಾಷ್ಟ್ರೀಯ ಪ್ರದರ್ಶನದಿಂದ ಜಾಗತಿಕ ಆಕಾಂಕ್ಷೆಯವರೆಗೆ ಅವರ ಪಯಣವನ್ನು ಬೆಂಬಲಿಸಿದ್ದೇವೆ ಎಂದರು.

 ಪುರುಷರು, ಮಹಿಳೆಯರು ಹಾಗೂ ಯು–18 ವಿಭಾಗಗಳ ಅರ್ಹತಾ ಪಂದ್ಯಗಳು- 27 ಸೆಪ್ಟೆಂಬರ್ 2025

ಪುರುಷರು, ಮಹಿಳೆಯರು ಹಾಗೂ ಯು–18 (ಸಿಂಗಲ್ಸ್ ಮತ್ತು ಡಬಲ್ಸ್) ಮುಖ್ಯ ಡ್ರಾ: 29 ಸೆಪ್ಟೆಂಬರ್ – 4 ಅಕ್ಟೋಬರ್ 2025

ಯು–16 ಮತ್ತು ಯು–14 (ಹುಡುಗರು ಮತ್ತು ಹುಡುಗಿಯರು): 5 – 11 ಅಕ್ಟೋಬರ್ 2025

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net