More

    ಭಾರತ-ಇಂಗ್ಲೆಂಡ್ ನಡುವಿನ ಅಹರ್ನಿಶಿ ಟೆಸ್ಟ್‌ಗೂ ಸ್ಪಿನ್ ಪಿಚ್ ನಿರೀಕ್ಷೆ

    ಅಹಮದಾಬಾದ್: ಸಾಮಾನ್ಯವಾಗಿ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್‌ಗಳ ದರ್ಬಾರ್ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರವಾಸಿ ಇಂಗ್ಲೆಂಡ್ ತಂಡ ಇದೇ ನಿರೀಕ್ಷೆಯೊಂದಿಗೆ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದರೆ ನಿರಾಸೆ ಎದುರಿಸಲಿದೆ. ಯಾಕೆಂದರೆ ಮೊಟೆರಾದಲ್ಲಿ ಬುಧವಾರದಿಂದ ನಡೆಯಲಿರುವ ಈ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಸ್ಪಿನ್ ಸ್ನೇಹಿ ಪಿಚ್ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

    ಈ ಹಿಂದೆ 2019ರ ನವೆಂಬರ್‌ನಲ್ಲಿ ಕೋಲ್ಕತದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದಲ್ಲಿ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್ ಪಂದ್ಯ ನಡೆದಿತ್ತು. ಅದರಲ್ಲಿ ಬಾಂಗ್ಲಾ ತಂಡದ ಎಲ್ಲ ವಿಕೆಟ್‌ಗಳನ್ನು ಭಾರತ ತಂಡದ ವೇಗಿಗಳೇ ಕಬಳಿಸಿದ್ದರು. ಆದರೆ ಈ ಬಾರಿ ಅಹಮದಾಬಾದ್‌ನಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇರಲಿದೆ ಎನ್ನಲಾಗಿದೆ.

    ಇದನ್ನೂ ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

    ಚೆನ್ನೈನಲ್ಲಿ ನಡೆದ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳ ಪಿಚ್ ಸ್ಪಿನ್ ಸ್ನೇಹಿಯಾಗಿದ್ದವು. ಅದರಲ್ಲೂ 2ನೇ ಟೆಸ್ಟ್ ವೇಳೆ ಮೊದಲ ದಿನದಿಂದಲೇ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಿದ್ದರು. ‘ಈ ಸಲವೂ ಟರ್ನಿಂಗ್ ಪಿಚ್ ಇರಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರಲು ಉಳಿದೆರಡು ಪಂದ್ಯಗಳೂ ನಿರ್ಣಾಯಕವಾಗಿರುವುದರಿಂದ ತವರಿನ ಲಾಭ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಕರೊನಾ ಭೀತಿಯಿಂದಾಗಿ ಎಂಜಲು ಹಚ್ಚಲು ಅವಕಾಶವಿಲ್ಲದ ಕಾರಣ ಪಿಂಕ್ ಚೆಂಡು ಬೇಗನೆ ಹೊಳಪು ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಚೆಂಡು ಸ್ವಿಂಗ್ ಆಗುವ ನಿರೀಕ್ಷೆಯೂ ಇದೆ. ಇದು ಹೆಚ್ಚಿನ ಸ್ವಿಂಗ್ ಬೌಲರ್‌ಗಳನ್ನು ಹೊಂದಿರುವ ಇಂಗ್ಲೆಂಡ್‌ಗೆ ನೆರವಾಗುವ ಭೀತಿಯೂ ಇದೆ.

    ಕ್ರೀಡಾಂಗಣ ಉದ್ಘಾಟನೆಗೆ ರಾಷ್ಟ್ರಪತಿ
    ಭಾರತ-ಇಂಗ್ಲೆಂಡ್ 3ನೇ ಟೆಸ್ಟ್‌ಗೆ ಪೂರ್ವಭಾವಿಯಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಎನಿಸಿರುವ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಬುಧವಾರ ಉದ್ಘಾಟಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡ ಈ ವೇಳೆ ಹಾಜರಿರಲಿದ್ದಾರೆ. ಬಳಿಕ ಇಬ್ಬರೂ ಪಂದ್ಯದ ಮೊದಲ ದಿನದಾಟವನ್ನು ಕೆಲಕಾಲ ವೀಕ್ಷಿಸಲಿದ್ದಾರೆ. ಇದರಿಂದಾಗಿ ಕ್ರೀಡಾಂಗಣದ ಭದ್ರತೆಯನ್ನು ಸಾಕಷ್ಟು ಬಿಗಿಗೊಳಿಸಲಾಗಿದೆ. ಜತೆಗೆ ಸ್ಟೇಡಿಯಂಗೆ ಆಗಮಿಸುವ ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

    ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts