More

  22, 23ರಂದು ಹಿಂದುಸ್ತಾನ್ ಕಾಲೇಜಿನಲ್ಲಿ ಸ್ಪೆಕ್ಟ್ರಾ ಸ್ಪರ್ಧೆ

  ಮೈಸೂರು: ಜೆ.ಪಿ.ನಗರದಲ್ಲಿನ ಹಿಂದುಸ್ತಾನ್ ಕಾಲೇಜಿನಲ್ಲಿ ಮಾ.22 ಮತ್ತು 23ರಂದು ಎರಡು ದಿನಗಳ ರಾಷ್ಟ್ರ ಮಟ್ಟದ ಅಂತರ ಕಾಲೇಜು ವ್ಯವಹಾರ ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ವಾಯುಯಾನ ಮತ್ತು ಸಾಂಸ್ಕೃತಿಕ ವಿಷಯಗಳ ಸ್ಪೆಕ್ಟ್ರಾ ಎಂಬ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪ್ರಾಂಸುಪಾಲರಾದ ಡಾ.ಸಿ.ಜೆ.ಪ್ರಿಯಾ ತಿಳಿಸಿದರು.

  ಮಾ.22 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಾ.23 ರಂದು ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ಸಮಾರೋಪ ನಡೆಯಲಿದೆ. ಈ ವೇಳೆ ಒಟ್ಟು 13 ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಒಟ್ಟಾರೆ ನಗದು ಹಾಗೂ ಟ್ರೋಫಿಗಳನ್ನು ಒಳಗೊಂಡಂತೆ 1 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಅತಿ ಹೆಚ್ಚು ಬಹುಮಾನ ಪಡೆದ ತಂಡಕ್ಕೆ 20 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನಕ್ಕೆ ಹತ್ತು ಸಾವಿರ ರೂ. ಮತ್ತು ಟ್ರೋಫಿ, ರನ್ನರ್ ಅಪ್‌ಗಳಿಗೂ ಟ್ರೋಫಿ ದೊರೆಯಲಿದೆ. ಸ್ನಾತಕ, ಸ್ನಾತಕೋತ್ತರ, ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

  ಕಾಲೇಜಿನ ವಿಶೇಷಾಧಿಕಾರಿ ಏಬಲ್ ಮ್ಯಾಥ್ಯೂ ಪ್ರಸಾದ್, ಕಾರ್ಯಕ್ರಮದ ಸಂಚಾಲಕರಾದ ಮೋಹನ್‌ಕುಮಾರ್, ಸವಿತಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts