More

    ದೇಗುಲಗಳಲ್ಲಿ ವಿಶೇಷ ಪೂಜೆ

    ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂಗವಾಗಿ ವಿಶೇಷ ಪೂಜೆ, ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಪಟ್ಟಣದ ದೊಡ್ಡಕೆರೆ ಸಮೀಪವಿರುವ ಮಹದೇಶ್ವರ, ಉಗ್ರಾಣಪುರದೊಡ್ಡಿ, ಮೂಗನಕೊಪ್ಪಲು, ಬೆಳಕವಾಡಿ ಸಮೀಪದ ಸರಗೂರು, ನೆಲ್ಲಿಗೆರೆ, ದುಗ್ಗನಹಳ್ಳಿ, ರಾಗಿಬೊಮ್ಮನಹಳ್ಳಿ ಗ್ರಾಮಗಳ ಮಹದೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಸ್ಥಾನದ ಸುತ್ತಲೂ ಭಕ್ತರು ದೀಪ ಬೆಳಗುವ ಮೂಲಕ ದೀಪೋತ್ಸವ ನೆರವೇರಿಸಿದರು. ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

    ತಳಗವಾದಿ ಉಮಾಮಹೇಶ್ವರಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಹಾಗೂ ಸಂಜೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಜಿ.ಮಂಟೇಸ್ವಾಮಿ ಮಠ, ತೆಂಕಹಳ್ಳಿ ಶನೈಶ್ಚರಸ್ವಾಮಿ, ಹೆಬ್ಬಟ್ಟದ ಬಸವೇಶ್ವರ , ಪೂರಿಗಾಲಿ ಪಾತಾಳೇಶ್ವರ , ಬೆಳಕವಾಡಿ ಶಿವಲಂಕಾರೇಶ್ವರ, ಮುತ್ತತ್ತಿ ಆಂಜನೇಯಸ್ವಾಮಿ, ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಬೀರೇಶ್ವರ, ರಾಗಿಬೊಮ್ಮನಹಳ್ಳಿಯ ಮನೆಮಂಚಮ್ಮ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts