More

    ಕಡಕ್​ನಾಥ್ ಕೋಳಿ ಸಾಕಿ, ಕೈತುಂಬ ಗಳಿಸಿ..

    ಕಡಕ್​ನಾಥ್ ಕೋಳಿ ಸಾಕಿ, ಕೈತುಂಬ ಗಳಿಸಿ..ಕಡಕ್​ನಾಥ್ ಕೋಳಿ…!
    ಏನಪ್ಪಾ ಇದು ಹೆಸರೇ ಇಷ್ಟು ವಿಚಿತ್ರವಾಗಿದೆಯಲ್ಲ ಅಂತ ಕೇಳ್ತಿದ್ದೀರಾ? ಹೌದು, ಇದು ಮಧ್ಯಪ್ರದೇಶ ಮೂಲದ ಬುಡಕಟ್ಟು ಜನಾಂಗದವರು ಸಾಕಣೆ ಮಾಡುತ್ತಿದ್ದ ಕೋಳಿಯ ವೆರೈಟಿ. 2018ರ ನಂತರದಲ್ಲಿ ಇದು ದೇಶಾದ್ಯಂತ ಮುನ್ನೆಲೆಗೆ ಬಂದಿದೆ. ಹಲವು ಭಾಗಗಳಲ್ಲಿ ರೈತರು ಈ ಕೋಳಿಯನ್ನು ಸಾಕಣೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಕಡುಕಪ್ಪು ಬಣ್ಣದ ಈ ಕೋಳಿಯ ಮಾಂಸವೂ ಕಪ್ಪು. ಔಷಧೀಯ ಗುಣಗಳು ಹೆಚ್ಚಿಗೆ ಇರುವುದರಿಂದ ಈ ಕೋಳಿಯ ಮಾಂಸ ಮತ್ತು ಮೊಟ್ಟೆಗೆ ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆ ಇದೆ. ಕೋಳಿ ಸಾಕಣೆ ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎನ್ನುವವರಿಗೆ ಕಡಕ್​ನಾಥ್ ಒಳ್ಳೆಯ ಆಯ್ಕೆ.

    ಕಡಕ್​ನಾಥ್ ಕೋಳಿ ಸಾಕಿ, ಕೈತುಂಬ ಗಳಿಸಿ..ಈ ಕೋಳಿಯ 1 ಕೆಜಿ ಮಾಂಸಕ್ಕೆ 800 ರೂ.: ಕಡಕ್​ನಾಥ್ ಕೋಳಿ ಸಾಕಣೆಗೆ ಫಾರಂ ಕೋಳಿ ಸಾಕಣೆಗೆ ಬೇಕಾಗುವಷ್ಟು ಹಣದ ಅಗತ್ಯವಿಲ್ಲ. ಇಲ್ಲಿ ಸಾಕಾಣಿಕೆ ಖರ್ಚು ಕಡಿಮೆ ಇರುವುದರಿಂದ ಹೆಚ್ಚು ಲಾಭದಾಯಕ. ಕಡಕ್​ನಾಥ್ ಕೋಳಿಯ 1 ಕೆ.ಜಿ. ಮಾಂಸಕ್ಕೆ ಮಾರುಕಟ್ಟೆಯಲ್ಲಿ 700ರಿಂದ 800 ರೂ. ಇದೆ. ಇನ್ನು ಪ್ರತಿ ಮೊಟ್ಟೆಗೆ 40ರಿಂದ 50 ರೂ. ಇದೆ. ಕಡಕ್​ನಾಥ್ ಕೋಳಿ ಮಾಂಸ ಮತ್ತು ಮೊಟ್ಟೆಯಲ್ಲಿ ಔಷಧೀಯ ಗುಣಗಳಿವೆ ಎಂಬ ಕಾರಣಕ್ಕೆ ಈ ಕೋಳಿಯ ಉತ್ಪನ್ನಗಳಿಗೆ ಬೆಲೆ ಹೆಚ್ಚು. ಸಾಮಾನ್ಯವಾಗಿ ಈ ಕೋಳಿ 5 ತಿಂಗಳಿಗೆ ಕಟಾವಿಗೆ ಬರುತ್ತದೆ. ಒಂದು ಕೋಳಿ ಒಂದರಿಂದ ಒಂದೂವರೆ ಕೆ.ಜಿ. ತೂಗುತ್ತದೆ.

    ಸಾವಿರ ಕೋಳಿ ಸಾಕಿದರೆ 6 ತಿಂಗಳಿಗೆ 8 ಲಕ್ಷ ರೂ. ಆದಾಯ: ನಿಮ್ಮ ಬಳಿ ಸುಮಾರು 2 ಸಾವಿರ ಚದರಡಿ ವಿಸ್ತೀರ್ಣದ ಜಾಗವಿದ್ದು, ಅಲ್ಲಿ ಒಂದು ಸಾವಿರ ಕಡಕ್​ನಾಥ್ ಕೋಳಿಗಳನ್ನು ಸಾಕಣೆ ಮಾಡಿದರೆ 5 ತಿಂಗಳಿಗೆ ಬರೋಬ್ಬರಿ 8 ಲಕ್ಷ ರೂ. ಆದಾಯ ಗಳಿಸಬಹುದು. ಈ ಲೆಕ್ಕಾಚಾರ ಕಾಲ್ಪನಿಕ ಅಂದಾಜಲ್ಲ, ಕರುನಾಡ ರೈತರೊಬ್ಬರು ಇಷ್ಟು ಆದಾಯ ಗಳಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

    ಈ ಕೋಳಿ ಮಾಂಸದಲ್ಲಿದೆ ಔಷಧೀಯ ಗುಣ: ಫಾರಂ ಕೋಳಿಗೆ ಹೋಲಿಸಿದರೆ ಕಡಕ್​ನಾಥ್ ಮಾಂಸ ಅತ್ಯಂತ ರುಚಿಕರ. ಈ ಕೋಳಿ, ರೈತರು ಮನೆಗಳಲ್ಲಿ ಸಾಕುತ್ತಿದ್ದ ನಾಟಿ ಕೋಳಿಯಂತೆ ಕಪ್ಪುಬಣ್ಣ ಹೊಂದಿದ್ದು ಮಧ್ಯಪ್ರದೇಶ ಮೂಲದ್ದಾಗಿದೆ. ನರ ದೌರ್ಬಲ್ಯ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಸೇರಿ ಅನೇಕ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ ಎನ್ನಲಾಗಿದೆ. ಕೊಬ್ಬಿನ ಅಂಶ ಕೂಡ ಕಡಿಮೆಯಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. ಬಿಪಿ, ಸಕ್ಕರೆ ಕಾಯಿಲೆ ಪೀಡಿತರಿಗೂ ಇದು ಉತ್ತಮ ಆಹಾರ ಎಂದು ತಜ್ಞರು ಹೇಳುತ್ತಾರೆ.

    ಕಡಕ್​ನಾಥ್ ಕೋಳಿಗಳ ಆಹಾರ ಮತ್ತು ಆರೋಗ್ಯ: ಫಾರಂ ಕೋಳಿಗಳಿಗಾದರೆ 2-3 ರೀತಿಯ ಫೀಡ್​ಗಳನ್ನು ಬಳಸಬೇಕು. ಆದರೆ ಕಡಕ್​ನಾಥ್ ಕೋಳಿಗಳಿಗೆ ಆರಂಭಿಕ ಹಂತದಲ್ಲಿ ಮಾತ್ರ ಫೀಡ್ ಒದಗಿಸಬೇಕಾಗುತ್ತದೆ. ನಂತರದಲ್ಲಿ ಅಕ್ಕಿ, ಗೋಧಿ, ರಾಗಿ, ತರಕಾರಿ ಮತ್ತಿತರ ಆಹಾರ ಪದಾರ್ಥಗಳನ್ನು ನೀಡಬಹುದು. ಇದಕ್ಕೆ ಹೆಚ್ಚಾಗಿ ವಾಣಿಜ್ಯ ಆಹಾರ ಒದಗಿಸುವ ಅವಶ್ಯಕತೆಯಿಲ್ಲ. ಸಾಮಾನ್ಯ ಕೊಳಿಗಳಂತೆ ಇವು ಹೊಲದಲ್ಲಿ ಅಡ್ಡಾಡಿ ಮಣ್ಣು ಕೆದಕಿ ಹುಳ-ಹುಪ್ಪಟೆ ತಿನ್ನುತ್ತವೆ.

    ಕಡಕ್​ನಾಥ್ ಕೋಳಿ ಸಾಕಿ, ಕೈತುಂಬ ಗಳಿಸಿ..ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕಡಕ್​ನಾಥ್ ಕೋಳಿ ಕೋರ್ಸ್: ಜನರ ಆದಾಯ ಹೆಚ್ಚಿಸಬೇಕು ಎನ್ನುವುದೇ ಫೈನಾನ್ಸಿಯಲ್ ಫ್ರೀಡಂ ಆಪ್​ನ ಮೂಲ ಧ್ಯೇಯ. ಹಾಗಾಗಿ ಹೆಚ್ಚು ಲಾಭ ತಂದುಕೊಡುವ ಕಡಕ್​ನಾಥ್ ಕೋಳಿ ಬಗ್ಗೆ ವಿಶೇಷ ಕೋರ್ಸ್​ವೊಂದನ್ನು ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ರೂಪಿಸಿದ್ದೇವೆ. ಕಡಕ್​ನಾಥ್ ಕೋಳಿ ಸಾಕಣೆ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ವಿಜಯಕುಮಾರ್ ಈ ಕೋರ್ಸ್​ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಕಡಕ್​ನಾಥ್ ಕೋಳಿಯ ಮರಿಗಳನ್ನು ಎಲ್ಲಿಂದ ತರಬೇಕು, ಹೇಗೆ ಸಾಕಣೆ ಮಾಡಬೇಕು, ಆಹಾರ ವ್ಯವಸ್ಥೆ ಹೇಗೆ, ಮಾರುಕಟ್ಟೆ ಮಾಡುವುದು ಹೇಗೆ.. ಇತ್ಯಾದಿ ಪ್ರತಿಯೊಂದು ವಿಚಾರದ ಬಗ್ಗೆಯೂ ವಿಸõತವಾಗಿ ತಿಳಿಸಿಕೊಟ್ಟಿದ್ದಾರೆ. ಹಾಗಾದರೆ ಇನ್ನೇಕೆ ತಡ ಕೃಷಿಯ ಜತೆ ಉಪ ಕಸುಬಾಗಿ ಅಥವಾ ಪ್ರತ್ಯೇಕ ಮುಖ್ಯ ಕಸುಬಾಗಿ ಕಡಕ್​ನಾಥ್ ಕೋಳಿ ಸಾಕಣೆ ಶುರು ಮಾಡಿ, ಹೆಚ್ಚೆಚ್ಚು ದುಡಿಮೆ ನಿಮ್ಮದಾಗಿಸಿಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts