More

    ಯುವಶಕ್ತಿಯನ್ನು ನಾಶಗೊಳಿಸಿದರೆ ದೇಶವೇ ನಾಶ: ಪೊಲೀಸ್​ ವರಿಷ್ಠಾಧಿಕಾರಿ -ಬಿ.ಎಸ್​ ನೇಮಗೌಡ.

    ವಿಜಯವಾಣಿ ಸುದ್ದಿಜಾಲ ಗದಗ
    ಡ್ರಗ್​, ಇತರೆ ದುಶ್ಚಟಗಳಿಂದ ಯುವಶಕ್ತಿ ನಾಶವಾಗುತ್ತಿದೆ. ಯುವಶಕ್ತಿ ನಾಶವಾದರೆ ದೇಶವೇ ನಾಶವಾದಂತೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ಹೇಳಿದರು.
    ನಗರದ ಕೆಎಲ್​ಎ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸ್​ ಆಶ್ರಯದಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಡ್ರಗ್ಸ್​ ನಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಶಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ನಡೆಯುತ್ತಿರುವುದು ದುರಂತವೇ ಸರಿ. ಇದನ್ನು ಡ್ರಗ್ಸ್​ ಭಯೋತ್ಪಾದನೆ ಎಂದು ಕರೆಯಬೇಕು. ಇದು ದೇಶದ ಪ್ರಗತಿಗೆ ಆತಂಕಕಾರಿಯದ ಸಂಗತಿಯಾಗಿದೆ. ಯುವಶಕ್ತಿಯೂ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿರುವುದರಿಂದ ಕೌಟುಂಬಿಕ ಹಾಗೂ ಸಾಮಾಜಿಕ ಸ್ವಾಸ್ಥ$್ಯ ಹದಗೆಡುತ್ತಿದೆ. ಅಪರಾಧಿ ಮನೋಭಾವನೆ ಹೆಚ್ಚುತ್ತಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಡ್ರಗ್​, ಗೂಟಕ, ಗಾಂಜಾ, ಕುಕೇನ್​ ನಂತಹ ನಾಕೋರ್ಟಿಕ್​ ಡ್ರಗ್ಸ್​ ಗಳು ವಿದೇಶಗಳಿಂದ ಆಗಮಿಸುತ್ತಿವೆ. ಈ ವ್ಯವಹಾರದಿಂದ ಕೋಟ್ಯಂತರ ರೂ. ಹಣವನ್ನು ಕಳ್ಳ ಮಾರ್ಗದಿಂದ ಸಂಪಾದಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳಿಂದ ಇಂದಿನ ಯುವಕರು ಜಾಗೃತರಾಗಬೇಕು. ಅವುಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣದ ಭಾಗವಾಗಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್​. ಪಿ. ಸಂಶಿಮಠ ಮಾತನಾಡಿ, ಇಂತಹ ಕಾರ್ಯಕ್ರಮವು ನಮ್ಮ ಮಹಾವಿದ್ಯಾಲಯದಲ್ಲಿ ಜರಗುವುದರಿಂದ ವಿದ್ಯಾಥಿರ್ಗಳು ಜಾಗೃತವಾಗುತ್ತಾರೆ ಎಂದರು.
    ಪ್ರೊ. ಪಿ. ಜಿ. ಪಾಟೀಲ್​, ಈಶಣ್ಣ ಮುನ್ನವಳ್ಳಿ, ಪ್ರೊ. ಪ್ರದಿಪ್​ ಸಂಗಪ್ಪಗೊಳ, ಪ್ರೊ. ಬಿ. ಆರ್​. ಚಿನಗುಂಡಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts