More

    ಯುಪಿಎಸ್‌ಸಿಯಲ್ಲಿ 101ನೇ ರ‍್ಯಾಂಕ್; ಸ್ವ ಪ್ರಯತ್ನಕ್ಕೆ ಒಲಿದ ಐಎಎಸ್ `ಸೌಭಾಗ್ಯ’

    ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿಯಲ್ಲಿ 101ನೇ ರ‍್ಯಾಂಕ್ ಪಡೆದಿದ್ದಾರೆ. ದಾವಣಗೆರೆಯ ಸೌಭಾಗ್ಯ ತಂದೆ ಶರಣಯ್ಯ ಸ್ವಾಮಿ ನರ್ಸರಿ ನಡೆಸುತ್ತಿದ್ದಾರೆ. ತಾಯಿ ಶರಣಮ್ಮ ಗೃಹಿಣಿ.
    ಐಎಎಸ್ ಅಽಕಾರಿ ಆಗಬೇಕು ಎಂಬುದು ಇವರ ಗುರಿಯಾಗಿತ್ತು. ದಾವಣಗೆರೆಯ ಸಿದ್ಧಗಂಗಾ ಪಿಯು ಸೈನ್ಸ್ ಕಾಲೇಜಿನಲ್ಲಿ ಶೇ. 98 ಅಂಕ ಗಳಿಸಿದ್ದ ಸೌಭಾಗ್ಯ, ಕಾಲೇಜಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದರು. ನಂತರ ೨೦೨೨ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್.ಸಿ ಕೃಷಿ ಪದವಿ ಪೂರೈಸಿದ ಸೌಭಾಗ್ಯ ಯುಪಿಎಸ್‌ಸಿ ತಯಾರಿ ಮುಂದುವರಿಸಿದ್ದರು.
    ಪದವಿ ದಿನಗಳಲ್ಲೇ ಯುಪಿಎಸ್‌ಸಿ ತಯಾರಿ ಮಾಡುತ್ತಿದ್ದರು. ಲಾಕ್‌ಡೌನ್ ಅವಽಯನ್ನು ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ಸದ್ಬಳಕೆ ಮಾಡಿಕೊಂಡರು. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪಾಸಾಗಿರಲಿಲ್ಲ. ಧೈರ್ಯಗುಂದದ ಸೌಭಾಗ್ಯ, ತಯಾರಿ ಮುಂದುವರಿಸಿದ್ದರು. ೨ನೇ ಪ್ರಯತ್ನದಲ್ಲಿ ಉತ್ತಮ ಅಂಕ ಗಳಿಸಿ ೧೦೧ನೇ ರ‍್ಯಾಂಕ್ ಪಡೆದು ಯಶಸ್ಸು ಗಳಿಸಿದ್ದಾರೆ. ಕೋಚಿಂಗ್ ಇಲ್ಲದೆ, ಸ್ವಂತ ಓದಿನ ಮೂಲಕ ಅತ್ಯುನ್ನತ ನಾಗರಿಕ ಸೇವೆಗೆ ಅಣಿಯಾಗಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts