More

    ಕೆಲವರು ನನ್ನ ವರ್ಚಸ್ಸನ್ನು ಹಾಳು ಮಾಡಲು ಸುಪಾರಿ ನೀಡಿದ್ದಾರೆ: ಪ್ರಧಾನಿ ಮೋದಿ

    ಭೋಪಾಲ್​: ಕೆಲವರು ನನ್ನ ವರ್ಚಸ್ಸನ್ನು ಹಾಳು ಮಾಡಲು ದೇಶದ ಒಳಗೆ-ಹೊರಗೆ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್​ ಹೆಸರು ಹೇಳದೆ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

    ಭೋಪಾಲ್​ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಭೋಪಾಲ್​-ದೆಹಲಿ ನಡುವಿನ ವಂದೇ ಭಾರತ್​ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಪ್ರಧಾನಿ ಮೋದಿ ಈ ಹಿಂದೆ ಇದ್ದ ಸರ್ಕಾರಗಳು ವೋಟ್​ ಬ್ಯಾಂಕ್​ಗಾಗಿ ಓಲೈಕೆ​ ರಾಜಕಾರಣದಲ್ಲಿ ತೊಡಗಿದ್ದವು. ಆದರೆ, ನಮ್ಮ ಸರ್ಕಾರವು ಅಭಿವೃದ್ಧಿ ಕೆಲಸಗಳ ಮೂಲಕ ಜನರನ್ನು ಸಂತೃಪ್ತಗೊಳಿಸುತ್ತಿದ್ದೇವೆ ಎಂದು ಹೇಳಿದ್ಧಾರೆ.

    ಅಂದಿನ ಸರ್ಕಾರಗಳು ಒಂದೇ ಕುಟುಂಬವನ್ನು ದೇಶದ ಮೊದಲ ಕುಟುಂಬವೆಂದು ಪರಿಗಣಿಸಿದ್ದವು. ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರನ್ನು ಕಡೆಗಣಿಸಿದ್ದವು ಎಂಬುದಕ್ಕೆ ರೈಲ್ವೆ ಇಲಾಖೆ ಮುಖ್ಯ ಉದಾಹರಣೆ ಎಂದಿದ್ದಾರೆ.

    ಇದನ್ನು ಓದಿ: ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಒಪ್ಪಲಾಗದು; ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ

    ಕಾಂಗ್ರೆಸ್​ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಯುಕೆ ಮತ್ತು ಜರ್ಮನಿಯಲ್ಲಿ ರಾಹುಲ್​ ಗಾಂಧಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಪ್ರತಿಕ್ರಿಯೆ ಬಂದಿದೆ

    ನಮ್ಮ ದೇಶದಲ್ಲಿ ಕೆಲವರು ಇದ್ದಾರೆ 2014ರಿಂದಲೂ ದೃಢ ಸಂಕಲ್ಪ ಮಾಡಿದ್ಧಾರೆ ನನ್ನ ವರ್ಚಸ್ಸನ್ನು ಹಾಳು ಮಾಡಲು ಸುಪಾರಿ ನೀಡಿದ್ದಾರೆ. ಕೆಲವರು ದೇಶದೊಳಗೆ ಇದ್ದುಕೊಂಡು ಕೆಲಸ ಂಆಡಿದ್ದರೆ ಕೆಲವರು ದೇಶದ ಹೊರಗಿದ್ದು ಕೆಲಸ ಮಾಡುತ್ತಿದ್ದಾರೆ. ಈ ಜನರು ನಿರಂತರವಾಗಿ ಮೋದಿಗೆ ಇರುವ ಹೆಸರು ಹಾಗೂ ವರ್ಚಸ್ಸನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts