More

    ಕಿದ್ವಾಯಿ-ನಿಮ್ಹಾನ್ಸ್ ಮಾದರಿ ಇನ್ನಷ್ಟು ಆಸ್ಪತ್ರೆ; ರಾಜ್ಯದಲ್ಲಿ ವಲಯವಾರು ಕೇಂದ್ರಗಳ ಆರಂಭಕ್ಕೆ ಸಿಎಂ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿದ್ವಾಯಿ ಮತ್ತು ನಿಮ್ಹಾನ್ಸ್ ಮಾದರಿಯಲ್ಲಿ ವಲಯವಾರು ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದ್ದಾರೆ.

    ಬೆಂಗಳೂರು ಎಡಿಟರ್ಸ್ ಗಿಲ್ಡ್ ಜತೆಗೆ ಮಂಗಳವಾರ ರಾಜ್ಯ ಬಜೆಟ್ ಕುರಿತು ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಸಂಪಾದಕರ ಒಕ್ಕೂಟದ ಸಲಹೆಗಳನ್ನು ಆಲಿಸಿದರು. ಕ್ಯಾನ್ಸರ್ ಮಾರಿಯನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ರೋಗಿಗಳು ಬೆಂಗಳೂರಿಗೇ ಬರುವುದರಿಂದ ಈ ಎರಡೂ ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚುತ್ತಿದೆ. ಇದು ಅಲ್ಲಿ ಚಿಕಿತ್ಸೆ ನೀಡುವ ವೈದ್ಯ ಸಿಬ್ಬಂದಿ ಮೇಲೂ ಒತ್ತಡ ಉಂಟು ಮಾಡುವುದರಿಂದ ಸಹಜವಾಗಿಯೇ ಅನನುಕೂಲವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ತುರ್ತಾಗಿ ಕಿದ್ವಾಯಿ ಮತ್ತು ನಿಮ್ಹಾನ್ಸ್ ಮುಖ್ಯಸ್ಥರ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರು.

    ಆರೋಗ್ಯ, ಶಿಕ್ಷಣ, ಕೃಷಿ, ಪ್ರವಾಸೋದ್ಯಮ ಸೇರಿದಂತೆ ಪ್ರಮುಖ ವಲಯಗಳಿಗೆ ಈ ಬಾರಿಯೂ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿಗಳು ತಾಲೂಕು ಮಟ್ಟದಲ್ಲಿ ಮಾದರಿ ಪ್ರೌಢಶಾಲೆ ಆರಂಭಿಸುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ವಿಷಯದಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಬೇಕೆಂಬ ಕನಸನ್ನು ವಿವರಿಸಿದ ಅವರು, ಸಾಮಾನ್ಯ ಜನರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಈ ಬಾರಿಯ ಬಜೆಟ್​ನಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸುವ ಸುಳಿವು ನೀಡಿದರು. ಗರ್ಭಿಣಿಯರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುತ್ತಿದ್ದು ಅವರು ಆಯಾ ಕೇಂದ್ರಕ್ಕೇ ಬಂದು ಊಟ ಮಾಡಬೇಕೆಂಬ ಅವೈಜ್ಞಾನಿಕ ಕ್ರಮವನ್ನು ಬದಲಿಸಿ ಗರ್ಭಿಣಿಯರ ಮನೆ ಬಾಗಿಲಿಗೇ ಆಹಾರ ಕಿಟ್ ವಿತರಿಸಲು ಕಾರ್ಯಕ್ರಮ ರೂಪಿಸುವುದಾಗಿ ಪ್ರಕಟಿಸಿದರು.

    ಹಿಗ್ಗಲಿದೆ ಬಜೆಟ್ ಗಾತ್ರ: ಕರೊನಾ ಸಂಕಷ್ಟದ ನಡುವೆಯೂ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆ ಕಾಣುತ್ತಿದೆ. ತೆರಿಗೆ ಸಂಗ್ರಹ ಕೂಡ ಸಮಾಧಾನಕರ ಸ್ಥಿತಿ ತಲುಪಿದೆ. ಆರ್ಥಿಕ ಹೊಂದಾಣಿಕೆ ತುಸು ಕಷ್ಟವಾದರೂ ಕಳೆದ ಬಾರಿಯ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಮೊತ್ತ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಬದಲಾಗಿ ಒಂದಷ್ಟು ಪ್ರಮಾಣದಲ್ಲಿ ಬಜೆಟ್ ಗಾತ್ರ ಹೆಚ್ಚಿಸಲು ಕಸರತ್ತು ನಡೆಸುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಈ ಬಾರಿಯ ಬಜೆಟ್ ಸಭೆಗಳನ್ನು ಬಹುತೇಕ ಅಂತಿಮಗೊಳಿಸಿರುವ ಬಿಎಸ್​ವೈ, ಈ ಸಲದ ಮುಂಗಡ ಪತ್ರದಲ್ಲಿ ಕೃಷಿಕರೂ ಸೇರಿದಂತೆ ಎಲ್ಲ ವಲಯದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಘೊಷಣೆಗಳನ್ನು ಪ್ರಕಟಿಸುವ ಉತ್ಸಾಹ ತೋರಿದ್ದು ವಿಶೇಷ.

    ಉದ್ಯೋಗಿಗಳಿಗೆ ಗುಡ್​ ನ್ಯೂಸ್​! ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಲಿದೆ ವೇತನ

    14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts