More

    ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಸಾವಿರಾರು ಜನರು ಸಾಯುವಾಗ ಕರೊನಾ ಬಗ್ಗೆ ಇಷ್ಟೊಂದು ಚಿಂತೆಯೇಕೆ? ವೈದ್ಯರೇ ನೀಡಿದ್ದಾರೆ ಉತ್ತರ

    ವಾಷಿಂಗ್ಟನ್​: ಕರೊನಾ ವೈರಸ್​ ಪ್ರಪಂಚವನ್ನು ಭಯಭೀತವಾಗಿಸಿದೆ. ದಿನದಿಂದ ದಿನಕ್ಕೆ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ವೈರಸ್​ ತಡೆಗೆ ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ವರ್ಷದಲ್ಲಿ ಸಾವಿರಾರು ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ, ಅದರ ಬಗ್ಗೆ ಇಲ್ಲದ ಇಷ್ಟೊಂದು ಕಾಳಜಿ ಈಗೇಕೆ ಎನ್ನುವಂತಹ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಕರೊನಾ ಒಂದು ತೊಂದರೆಯೇ ಅಲ್ಲ, ಅದರ ಬಗ್ಗೆ ಸುಮ್ಮನೆ ಭಯ ಪಡಿಸುತ್ತಿದ್ದಾರೆ ಎನ್ನುವ ಉಡಾಫೆ ಮಾತುಗಳೂ ಸಹ ಕೇಳಿಬರುತ್ತಿದ್ದು, ಇಂತಹ ಅನೇಕ ವಿಚಾರಗಳಿಗೆ ಅಮೆರಿಕ ವೈದ್ಯರೊಬ್ಬರು ಉತ್ತರಿಸಿದ್ದಾರೆ.

    ಮೆರಿಲ್ಯಾಂಡ್​ ಯುಸಿಎಚ್​ ವಿಶ್ವವಿದ್ಯಾಲಯದ ಮುಖ್ಯ ಗುಣಮಟ್ಟ ಅಧಿಕಾರಿ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಫಹೀಮ್​ ಯೂನಸ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಕರೊನಾ ವೈರಸ್​ ಬಗ್ಗೆ ಅನೇಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವೈರಸ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಅನೇಕ ಸುಳ್ಳು ಸುದ್ದಿಗಳ ಕುರಿತಾಗಿ ಎಚ್ಚರಿಸಿದ್ದಾರೆ. ಅವರು ತಿಳಿಸಿರುವ ಕೆಲ ಮಾಹಿತಿ ಈ ಕೆಳಗಿನಂತಿದೆ.

    1) ಸುದ್ದಿ: ಕರೊನಾ ವೈರಸ್​ ತಡೆಯಲು ನಿಮ್ಮ ಮನೆಯ ಬಾಗಿಲಿನ ಹಿಡಿಕೆಗಳನ್ನು ತೊಳೆಯುತ್ತಿರಬೇಕು
    ನಿಜಾಂಶ: ಕರೊನಾ ತಡೆಗೆ ಇರುವ ಒಳ್ಳೆಯ ಕ್ರಮವೆಂದರೆ ಆಗಾಗ ನಿಮ್ಮ ಕೈಗಳನ್ನು ತೊಳೆಯವುದು. ನಿಮ್ಮ ಮನೆಯಲ್ಲಿ ಕರೊನಾ ಸೋಂಕಿತರು ಇಲ್ಲದಿದ್ದರೆ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ ಕರೊನಾ ತಡೆಯುವುದು ಅರ್ಥವಿಲ್ಲದ್ದು.

    2) ಸುದ್ದಿ: ಸ್ಯಾನಿಟೈಸರ್​ಗಳು ಸೋಪಿಗಿಂತ ಉತ್ತಮ
    ನಿಜಾಂಶ: ಸೋಪು ವೈರಸ್​ನ್ನು ಸಾಯಿಸುತ್ತದೆ. ಸ್ಯಾನಿಟೈರಸ್​ ಸಿಗಲಿಲ್ಲ ಎಂದಾಕ್ಷಣ ಚಿಂತಿಸುವ ಅವಶ್ಯಕತೆ ಇಲ್ಲ. ಸೋಪನ್ನೇ ಬಳಸಿ ಕೈ ತೊಳೆಯಬಹುದು. ಒಟ್ಟಿನಲ್ಲಿ ವೈರಸ್​ ಸಾಯುವುದು ಮುಖ್ಯವಷ್ಟೇ.

    3) ಸುದ್ದಿ: ಕರೊನಾ ವೈರಸ್​ ಅಷ್ಟೊಂದು ದುಷ್ಪರಿಣಾಮವನ್ನು ಬೀರುವುದಿಲ್ಲ
    ನಿಜಾಂಶ: ಸೋಂಕು ಹರಡದೇ ಇದ್ದರೆ ಅದೊಂದು ದೊಡ್ಡ ವಿಷಯವಲ್ಲ.

    4) ಸುದ್ದಿ: ಪ್ರತಿ ವರ್ಷ ಸಾವಿರಾರು ಜನರು ಅಪಘಾತದಿಂದ ಸಾಯುವಾಗ ಕರೊನಾ ದೊಡ್ಡ ವಿಚಾರವಲ್ಲ
    ನಿಜಾಂಶ: ಕಾರು ಅಪಘಾತ ಸಾಂಕ್ರಾಮಿಕವಲ್ಲ. ಅದು ಪ್ರತಿ ಮೂರು ದಿನಕ್ಕೊಮ್ಮೆ ದ್ವಿಗುಣವಾಗುವುದಿಲ್ಲ. ಅದು ಸಾಮಾಜಿಕವಾಗಿ ಯಾವುದೇ ಹೊಡೆತವನ್ನೂ ನೀಡುವುದಿಲ್ಲ. ಆದರೆ ಈ ವೈರಸ್​ ನೀಡುತ್ತದೆ.

    5) ಸುದ್ದಿ: ನೀರು ಕುಡಿಯುವುದರಿಂದ ಕರೊನಾ ವೈರಸ್​ನ್ನು ದೇಹದಿಂದ ಹೊರಹಾಕಹುದು
    ನಿಜಾಂಶ: ಯಾವುದೇ ವೈರಸ್​ನ್ನು ನೀರಿನಿಂದ ದೇಹದ ಹೊರಕ್ಕೆ ತೆಗೆಯಲು ಸಾಧ್ಯವಿಲ್ಲ, ಹೆಚ್ಚು ನೀರು ಕುಡಿಯುವುದರಿಂದ ನೀವು ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ ಅಷ್ಟೇ.

    ಈ ರೀತಿಯಲ್ಲಿ ಕರೊನಾ ವೈರಸ್​ನ ಬಗ್ಗೆ ಅನೇಕ ಸತ್ಯಾಂಶಗಳನ್ನು ಮತ್ತು ಜನರ ತಲೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ವೈದ್ಯ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ತಿಳಿಸಿಕೊಟ್ಟಿದ್ದಾರೆ. (ಏಜೆನ್ಸೀಸ್​)

    VIDEO| ಕರೊನಾ ಡ್ಯಾನ್ಸ್​ಗೆ ಪೊಲೀಸರ ಹೆಜ್ಜೆ; ವೈರಲ್​ ಆಯ್ತು ಕೇರಳ ಪೊಲೀಸರು ಕೈ ತೊಳೆಯೋ ಡ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts