More

    ಸಲ್ಲು ಮನೆಯಲ್ಲಿ ಮತ್ತೊಂದು ವಿಚ್ಚೇದನ: ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸೊಹೈಲ್​ ದಂಪತಿ!

    ಮುಂಬೈ: ಬಾಲಿವುಡ್​​ನಲ್ಲಿ ವಿಚ್ಚೇದನ, ಮರುವಿವಾಹ ಸಾಮಾನ್ಯವಾಗಿದೆ. ಬಾಲಿವುಡ್​ ಆರಂಭದ ದಿನಗಳಿಂದಲೂ ಇಂತಹ ವಿಷಯಗಳಿಗೇನೂ ಕಡಿಮೆ ಇಲ್ಲ.

    ಮದುವೆಯಾಗಿ ಒಂದೆರಡು ವರ್ಷವಾದರೆ ಪರ್ವಾಗಿಲ್ಲ, ಇತ್ತೀಚೆಗೆ ಎರಡು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ ಜೋಡಿಗಳು ವಿಚ್ಚೇದನ ತೆಗೆದುಕೊಂಡಿದ್ದಾರೆ. ಆ ಸಾಲಿನಲ್ಲಿ ಈಗ ಖ್ಯಾತ ನಟ ಸಲ್ಮಾನ್​ ಖಾನ್​ ಸಹೋದರ ಸೊಹೈಲ್​ ಸೇರಿದ್ದಾರೆ.

    24 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಈ ಜೋಡಿ ಈಗ ಬೇರೆ ಬೇರೆಯಾಗಲಿ ನಿರ್ಧರಿಸಿದ್ದಾರೆ. ಅಂತೆಯೇ ನ್ಯಾಯಾಲಯಕ್ಕೂ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದಾರೆ.

    1998ರಲ್ಲಿ ಮದುವೆಯಾದ ಈ ಜೋಡಿಗೆ ಎರಡು ಮಕ್ಕಳು ಇದ್ದಾರೆ. ಈಗ ಇಬ್ಬರಲ್ಲೂ ಯಾವುದೂ ಸರಿ ಇಲ್ಲ. ನಮ್ಮಲ್ಲಿ ಹೊಂದಾಣಿಕೆ ಇಲ್ಲ ಹಾಗಾಗಿ ನಾವು ದೂರವಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಸೀಮಾ ಖಾನ್​ ಹಾಗೂ ಸೊಹೈಲ್​ ಖಾನ್​ ಇಬ್ಬರು ಬಾಲಿವುಡ್​ನಲ್ಲಿ ತಕ್ಕಮಟ್ಟಿಗೆ ಸ್ಟಾರ್​ ದಂಪತಿಗಳೇ ಆಗಿದ್ದರು. ಸದ್ಯ ನಾನೇನು ಹೇಳಲು ಇಚ್ಚಿಸುವುದಿಲ್ಲ, ನೀವು ನೋಡುತ್ತಿರುವುದು ಸತ್ಯ ಎಂದಷ್ಟೇ ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಜೋಡಿ ಸದ್ಯ ಮುಂಬೈ ನ್ಯಾಯಾಲಯಕ್ಕೆ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದಾರೆ.

    ಇನ್ನು ಸಲ್ಮಾನ್​ ಖಾನ್​ ಮನೆಯಲ್ಲಿ ಇದು ಎರಡನೇ ವಿಚ್ಚೇದನ ಪ್ರಕರಣ ಆಗಿದೆ. ಈ ಮೊದಲು ಸಲ್ಮಾನ್​ ಮತ್ತೊಬ್ಬ ಸಹೋದರ ಅರ್ಬಾಜ್​ ಖಾನ್​, ಮಲೈಕಾ ಅರೋರಾ ಅವರೊಂದಿಗಿನ 21 ವರ್ಷಗಳ ದಾಂಪತ್ಯ ಜೀವನವನ್ನು ಮುರಿದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಇದೀಗ ಇಬ್ಬರು ಬೇರೆ ಬೇರೆಯಾಗಿದ್ದರು. ಸದ್ಯ ಮಲೈಕಾ ಅರೋರಾ ತಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಅರ್ಜುನ್​ ಕಪೂರ್​ ಜತೆ ಲಿವಿಂಗ್​ನಲ್ಲಿದ್ದಾರೆ. ಇತ್ತ ಅರ್ಬಾಜ್​ ಕೂಡ ಗೆಳತಿ ಜತೆ ಕಾಲ ಕಳೆಯುತ್ತಿದ್ದಾರೆ. ಈ ದಂಪತಿಗೂ ಒಬ್ಬ ಮಗನಿದ್ದೂ ಈತ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

    ಇನ್ನು ಮಲೈಕಾ ಅರೋರಾ ಕೂಡ ಸದ್ಯದಲ್ಲೇ ಅರ್ಜುನ್​ ಕಪೂರ್​ನೊಂದಿಗೆ ಮದುವೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಸಲ್ಮಾನ್​ ಖಾನ್​ ಮನೆಯಲ್ಲಿ ಇದು ಎರಡನೇ ವಿಚ್ಚೇದನ ಪ್ರಕರಣವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts