More

    ಸ್ವಿಜರ್ಲ್ಯಾಂಡ್ ಅನುಭವ ಈಗ ಮಂಗಳೂರಿನಲ್ಲಿ ಪಿಝ್ಜ ಬೈ ನೆಕ್ಸಸ್ ಮಾಲ್‌ನಲ್ಲಿ ಸ್ನೋ ಫ್ಯಾಂಟಸಿ ಆರಂಭ

    ಮಂಗಳೂರು: ಹಿಮ ವಾತಾವರಣ ಮತ್ತು ಮಂಜಿನ ವಿಶೇಷ ಅನುಭವ ನೀಡುವ ಸ್ನೋ ಫ್ಯಾಂಟಸಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝ್ಜ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭಗೊಂಡಿದೆ.


    ನಿಯೋ ಸ್ನೋ ಅಮ್ಯೂಸ್‌ಮೆಂಟ್ಸ್ ಆ್ಯಂಡ್ ಪಾರ್ಕ್ಸ್ ಇಂಡಿಯಾ ಪ್ರೈ. ಲಿ. ಸಂಸ್ಥೆ ಕೊಯಂಬತ್ತೂರು ಮತ್ತು ಕಲ್ಲಿಕೋಟೆ ನಂತರ ಮಂಗಳೂರಿನ ಈ ಪಾರ್ಕ್ ಮೂರನೆಯ ಹೆಗ್ಗುರುತಾಗಿದೆ. ಮಂಗಳೂರಿಗೆ ಇದು ಪ್ರಥಮ ಸ್ನೋ ಫ್ಯಾಂಟಸಿಯಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕ್ಯಾ. ಟಿ.ಎಸ್.ಅಶೋಕನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಕಳೆದ 28 ವರ್ಷಗಳ ಅನುಭವ ಹೊಂದಿ ಕೇರಳದಲ್ಲಿ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕನ್ನು ಮಲಪ್ಪುರಂ ಜಿಲ್ಲೆಯಲ್ಲಿ ನೀಡಿದ ನಾವು ಮಂಗಳೂರಿಗೂ ಈ ಪ್ರಥಮ ಸ್ನೋ ಫ್ಯಾಂಟಸಿಯನ್ನು ನೀಡುತ್ತಿದ್ದೇವೆ ಎಂದರು.


    ಅಂತರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಮ್, ಡಿಜೆ, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳು, ಹಿಮ ಶಿಖರಗಳು, ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಮೊದಲಾದುವು ಸ್ನೋ ಫ್ಯಾಂಟಸಿಯ ವಿಶೇಷತೆಗಳಾಗಿವೆ ಎಂದರು.
    ಸ್ನೋ ಪ್ಯಾಂಟಸಿಯ ನಿರ್ದೇಶಕ ಆದಿತ್ಯ ಅಶೋಕನ್ ಮಾತನಾಡಿ, ಮಂಗಳೂರಿನ ಬಿಸಿಲಿನ ವಾತಾವರಣದಲ್ಲಿ ಒದ್ದಾಡುವ ಈ ಸಂದರ್ಭದಲ್ಲಿ ಮನೆ-ಮಂದಿ-ಮಕ್ಕಳನ್ನೆಲ್ಲ ಕರೆ ತಂದು ಸ್ನೋ ಫ್ಯಾಂಟಸಿಯನ್ನು ಆಸ್ವಾದಿಸಲು ಸಕಾಲ. ಈ ಸ್ನೋ ಫ್ಯಾಂಟಸಿ ಪ್ರವೇಶ ಮಾಡುವವರಿಗೆ ಜಾಕೆಟ್, ಸಾಕ್ಸ್, ಬೂಟ್ ಮುಂತಾದವುಗಳನ್ನ ನೀಡಲಾಗುವುದು. ಸಾರ್ವಜನಿಕರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಮಟ್ಟುವ ಎಲ್ಲಾ ಕಾರ್ಯಕ್ಷಮತೆಯನ್ನು, ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದರು.


    ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಿ.ಒ.ಒ. ಜಯೇನ್ ನಾಯಕ್ ಮಾತನಾಡಿ, ಸ್ನೋ ಫ್ಯಾಂಟಸಿಯ ಅನುಭವ ವಿಶೇಷ. ನಮ್ಮ ಮಾಲ್‌ನ್ನು ಆಯ್ಕೆ ಮಾಡಿರುವುದು ಸಂತೋಷ. ನಮ್ಮ ಮಾಲ್ ಶುಚಿತ್ವ, ಸೇವೆ, ಬ್ರಾಂಡೆಡ್ ಮಳಿಗೆಗಳು, ಮನೋರಂಜನಾ ತಾಣ ಸೇರಿದಂತೆ ಎಲ್ಲಾ ವರ್ಗದ ಗ್ರಾಹಕರಿಗೆ ಪೂರಕವಾಗಿದೆ ಎಂದರು.


    ಕಂಪೆನಿಯ ನಿರ್ದೇಶಕರಾದ ಸಿಬಿನ್ ಸ್ಕರಿಯ, ಉನ್ನಿಕೃಷ್ಣನ್ ಪಿ., ಟಿ.ಎಸ್.ವಿಜಯನ್, ನೆಕ್ಸಸ್ ಸೆಲೆಕ್ಟ್ ಮಾಲ್ಸ್‌ನ ರೀಜನಲ್ ಡೈರೆಕ್ಟರ್ ಸೌತ್ ತನ್ವೀರ್ ಶೇಖ್, ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಹಾಗೂ ಕನ್ಸಲ್ಟೆಂಟ್ ವೇಣು ಶರ್ಮ ಉಪಸ್ಥಿತರಿದ್ದರು.

    ಇಂದಿನಿಂದ ಕಾರ್ಯಾಚರಣೆ: ಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಸಂತೋಷ ನೀಡುವ ಉದ್ದೇಶದಿಂದ ಆರಂಭವಾಗಿದೆ. ಈ ಪಾರ್ಕ್‌ನಲ್ಲಿ ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ. ಎ.4ರಿಂದ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಆಡಳಿತ ಅಧಿಕಾರಿ ವಿಪಿನ್ ಸ್ಕರಿಯ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts