More

    ಡಬ್ಲ್ಯುಎಂಪಿಎಲ್: ಸ್ಮತಿ ಮಂದನಾ ಐಕಾನ್ ಆಟಗಾರ್ತಿ

    ಪುಣೆ: ವುಮೆನ್ಸ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಯಶಸ್ಸು ಕಂಡ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಹಿಳಾ ಕ್ರಿಕೆಟಿಗರಿಗೆ ್ರಾಂಚೈಸಿ ಆಧಾರಿತ ರಾಜ್ಯ ಲೀಗ್ ಆಯೋಜಿಸುತ್ತಿದೆ. ಇದರೊಂದಿಗೆ ಮಹಿಳಾ ಲೀಗ್ ಆರಂಭಿಸುತ್ತಿರುವ ಬಿಸಿಸಿಐನ ಮೊದಲ ರಾಜ್ಯ ಕ್ರಿಕೆಟ್ ಸಂಸ್ಥೆ ಎನಿಸಿದೆ. ನಾಲ್ಕು ತಂಡ ಒಳಗೊಂಡ ಫ್ರಾಂಚೈಸಿ ಆಧಾರಿತ ಟಿ20 ಟೂರ್ನಿಯನ್ನು ಭಾನುವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧಿಕೃತ ೋಷಣೆ ಮಾಡಿದೆ.
    ಭಾರತ ಮಹಿಳಾ ತಂಡದ ಉಪನಾಯಕಿ ಸ್ಮತಿ ಮಂದನಾ ಭಾನುವಾರ ವುಮೆನ್ಸ್ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ (ಡಬ್ಲ್ಯುಎಂಪಿಎಲ್) ಉದ್ಘಾಟನಾ ಆವೃತ್ತಿಯ ಐಕಾನ್ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗಹುಂಜೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿದ್ದು, ಜೂನ್ 24ರಂದು ಚಾಲನೆ ದೊರೆಯಲಿದೆ. ಚಾಂಪಿಯನ್ ತಂಡಕ್ಕೆ 20 ಲಕ್ಷ ರೂ. ಹಾಗೂ ರನ್ನರ್ ಅಪ್‌ಗೆ 10 ಲಕ್ಷ ರೂ. ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ. ತಂಡಗಳ ಹರಾಜು ಏಪ್ರಿಲ್ 27 ಹಾಗೂ ಆಟಗಾರರ ಹರಾಜು ಪ್ರಕ್ರಿಯೆ ಮೇ 11ರಂದು ನಡೆಯಲಿದೆ. ಸ್ಮತಿ ಮಂದನಾ, ದೇವಿಕಾ ವೈದ್ಯ, ಅನುಜಾ ಪಾಟೀಲ್, ಕಿರಣ್ ನವಗಿರೆ ಹಾಗೂ ಶ್ರಧ್ಧಾ ಪೋಖ್ರಾಕರ್ ಪ್ರಮುಖ ಆಟಗಾರ್ತಿಯರೆನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts