More

    ಆಗಸ್ಟ್‌ನಲ್ಲಿ ಕೌಶಲಾಭಿವೃದ್ಧಿ ತರಬೇತಿ : ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್ ಮಾಹಿತಿ

    ತುಮಕೂರು : ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಚಿನ್ನ, ಬೆಳ್ಳಿ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಆಗಸ್ಟ್‌ನಲ್ಲಿ ಕೌಶಲಾಭಿವೃದ್ಧಿ ತರಬೇತಿ ಆರಂಭಿಸುತ್ತಿದ್ದು, ಆಸಕ್ತರು ಪ್ರಯೋಜನ ಪಡೆಯಬಹುದು ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್ ಹೇಳಿದರು.

    ನಗರದಲ್ಲಿ ಭಾನುವಾರ ಪ್ರಗತಿ ಪರಿಶೀಲನೆ ನಂತರ ವಿಶ್ವಕರ್ಮ ಸಮುದಾಯದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದಲ್ಲಿ ಕುಶಲತೆ ಕೊರತೆಯಿಲ್ಲ. ಆದರೆ, ಅವುಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.

    ವಿಶ್ವಕರ್ಮ ಸಮುದಾಯುದ ಯುವಜನರು ಕೀಳರಿಮೆ ತೊರೆಯಬೇಕು. ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೆಲಸವಿಲ್ಲದೆ ಇದ್ದಾರೆ. ಹಾಗಾಗಿ, ಸಮುದಾಯದ ಯುವಕರು ತಮ್ಮ ತಾತ, ತಂದೆಯಿಂದ ಬಂದ ಸಾಂಪ್ರದಾಯಿಕ ಕುಶಲತೆ ಜತೆಗೆ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನುರಿತ ತಜ್ಞರಿಂದ ತರಬೇತಿ ಪಡೆದುಕೊಂಡರೆ, ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯಬಹುದು ಎಂದರು.

    ಶಾಸಕ ಜಿ.ಬಿ.ಜೋತಿಗಣೇಶ್ ವಾತನಾಡಿ, ವಿಶ್ವಕರ್ಮ ಜನಾಂಗದ ಯುವಕರು ತಮ್ಮಲ್ಲಿರುವ ಕುಶಲತೆಯ ಜತೆಗೆ ತಾವು ತಯಾರಿಸುವ ವಸ್ತುಗಳ ಮೌಲ್ಯವರ್ಧನೆ ಮತ್ತು ವಾರುಕಟ್ಟೆಗೆ ಅಗತ್ಯ ತರಬೇತಿ ಪಡೆದರೆ ಹೆಚ್ಚಿನ ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ತುಮಕೂರು ನಗರ ಕೇಂದ್ರ ಗ್ರಂಥಾಲಯದ ಹಿಂಭಾಗದಲ್ಲಿ ನಿರ್ವಾಣಗೊಳ್ಳುತ್ತಿರುವ ಕಟ್ಟಡದಲ್ಲಿ ಎಂಎಸ್‌ಎಂಇನಿಂದ ತರಬೇತಿ ಕೇಂದ್ರದಲ್ಲಿ ವಿಶ್ವಕರ್ಮ ಸಮುದಾಯದ ಕೆಲಸಗಳಿಗೂ ಆದ್ಯತೆ ನೀಡಲಾಗುವುದು ಎಂದರು.

    ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ವಸಂತನರಸಾಪುರದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಸಾಂಪ್ರದಾಯಿಕ ಕುಸುರಿಯ ಜತೆಗೆ, ಅಧುನಿಕ ತಂತ್ರಜ್ಞಾನದ ಲಾಭ ಪಡೆದರೆ ಹೆಚ್ಚಿನ ಸಹಾಯವಾಗಲಿದೆ ಎಂದು ಸಲಹೆ ನೀಡಿದರು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೈ.ಆರ್.ಭಕ್ತಕುಚೇಲ, ಸಮುದಾಯದ ಜಿಲ್ಲಾಧ್ಯಕ್ಷ ಎಚ್.ಬಿ.ನಾಗರಾಜಾಚಾರ್, ಸಮುದಾಯದ ಮುಖಂಡರಾದ ಗೋರ್ವಧನಾಚಾರ್, ಚಂದ್ರಬಾಬು, ಉಮೇಶ್, ಶಶಿಧರ್ ಇದ್ದರು.

    ಚಿನ್ನಾಭರಣ ಕಳವು ಸಂದರ್ಭದಲ್ಲಿ ಆರೋಪಿ ಹೇಳಿದಾಕ್ಷಣ ಚಿನ್ನ, ಬೆಳ್ಳಿ ಅಂಗಡಿಯ ವಾಲೀಕನನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ, ತನಿಖೆ ನಡೆಸಿ, ಸಾಕ್ಷಾೃಧಾರ ದೊರೆತ ನಂತರ ಬಂಧಿಸಬೇಕು, ಕೋರ್ಟ್ ಆದೇಶ ಪತ್ರ ಎಲ್ಲ ಮುಖಂಡರು ಇಟ್ಟುಕೊಳ್ಳಬೇಕು, ಇದರಿಂದ ಪೊಲೀಸರಿಂದ ಶೋಷಣೆಗೊಳಗಾಗುವುದು ತಪ್ಪಲಿದೆ.
    ಬಾಬು ಪತ್ತಾರ್ ಅಧ್ಯಕ್ಷ, ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts