More

    ಜೋಳ ಖರೀದಿ ಕೇಂದ್ರ ಆರಂಭಿಸಿ


    ಸಿರವಾರ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಅನೇಕ ರೈತರು ಜೋಳ ಬೆಳೆದಿದ್ದು, ಪಟ್ಟಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ವಿಜಯೇಂದ್ರ ಎಸ್.ಹುಲಿನಾಯಕಗೆ ಶಾಖಾಪುರ, ಸಿಂಗಡದಿನ್ನಿ, ಮಾಚನೂರು, ಬೊಮ್ಮನಾಳ ಗ್ರಾಮದ ರೈತರು ಮಂಗಳವಾರ ಮನವಿ ಸಲ್ಲಿಸಿದರು.

    ಪಟ್ಟಣ ತಾಲೂಕು ಕೇಂದ್ರವಾಗಿ ನಾಲ್ಕು ವರ್ಷಗಳು ಗತಿಸಿದರೂ ಭತ್ತ, ಜೋಳ ಖರೀದಿ ಕೇಂದ್ರ ಆರಂಭಿಸುತ್ತಿಲ್ಲ. ಮಾನ್ವಿಯಲ್ಲಿ ಖರೀದಿ ಕೇಂದ್ರ ಮಾಡಲಾಗಿದೆ. ಅಲ್ಲಿ ಮೂರು ಸಾವಿರಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ. ಈ ಭಾಗದ ರೈತರು ಅಲ್ಲಿಗೆ ಜೋಳ ತೆಗೆದುಕೊಂಡು ಹೋಗಲು ವಾಹನದ ಖರ್ಚು ಹೊರೆ ಯಾಗುತ್ತದೆ. ಪಟ್ಟಣದಲ್ಲಿ ಖರೀದಿ ಕೇಂದ್ರ ಆರಂಭವಾದರೆ ಈ ಭಾಗದ ನೂರಾರು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts