More

    ನರೇಗಾ ಯೋಜನೆ ಸದುಪಯೋಗವಾಗಲಿ

    ಸಿರಗುಪ್ಪ: ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ವರ್ಷದಲ್ಲಿ 100 ದಿನಗಳ ಕೆಲಸ ಕೊಡುವ ಖಾತ್ರಿ ನೀಡಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ನೀಡಲು ದುಡಿಯೋಣ ಬಾ ಅಭಿಯಾನ ಹಮ್ಮಿಕೊಂಡಿದ್ದು, ಕೆಲಸಗಾರರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಬಳ್ಳಾರಿ ಜಿಪಂ ಉಪಕಾರ್ಯದರ್ಶಿ (ಆಡಳಿತ) ಬಸವರಾಜ ಅಡವಿಮಠ ತಿಳಿಸಿದರು.

    ತಾಲೂಕಿನ ಬಲಕುಂದಿ, ಉಪ್ಪಾರಹೊಸಳ್ಳಿ, ಭೈರಾಪುರ ಗ್ರಾಮಕ್ಕೆ ಶುಕ್ರವಾರ ಬೇಟಿ ನೀಡಿ ನರೇಗಾ ಯೋಜನೆಯಡಿ ಭೈರಾಪುರ ಗ್ರಾಪಂ ನಲ್ಲಿ ಶಾಲಾ ಕೌಂಪೌಂಡ್ ನಿರ್ಮಾಣ, ಬಲಕುಂದಿ ಗ್ರಾಮದಲ್ಲಿ ಕಲ್ಯಾಣಿ ಪುನಃಶ್ಚೇತನ ಮತ್ತು ಉಪ್ಪಾರಹೊಸಳ್ಳಿಯಲ್ಲಿ ನಾಲಬದು ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ನರೇಗಾ ಕೂಲಿ ಕಾರ್ಮಿಕರ ಕುಂದು-ಕೊರತೆ ಆಲಿಸಿ ಮಾತನಾಡಿದರು.

    ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ದಿನಗಳಲ್ಲಿ ರೈತರ ಜಮೀನಿನಲ್ಲಿ ಕೆಲಸವಿಲ್ಲದೆ ಕೂಲಿ ಕೆಲಸ ಮಾಡುವ ಜನ ಪಟ್ಟಣಗಳಿಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಇದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಕೆಲಸವನ್ನು ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಆಯಾ ಗ್ರಾಮಗಳಲ್ಲೇ ಚೆಕ್‌ಡ್ಯಾಂ, ಕೆರೆಹೂಳೆತ್ತುವುದು, ಕ್ಷೇತ್ರಬದು ನಿರ್ಮಾಣ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಮೀನು ಹೊಂಡ, ಕುರಿಕೋಳಿ ಶೆಡ್ ನಿರ್ಮಾಣ , ಶಾಲಾ ಕಾಂಪೌಂಡ್, ನಾಲಾ ಹೂಳೆತ್ತುವುದು, ಅರಣ್ಯೀಕರಣ ಸೇರಿ ಹಲವು ಕೆಲಸಗಳನ್ನು ನರೇಗಾ ಯೋಜನೆಯಡಿ ಮಾಡಿಕೊಳ್ಳಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts