More

  ಆಸ್ತಿ ನಾಶ ದೇಶ ದ್ರೋಹದ ಕೆಲಸ

  ಸಿರಿಗೆರೆ: ದೇಶದಲ್ಲಿ ಒಂದೆಡೆ ಸಡಗರ, ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಿದರೆ ಮತ್ತೊಂದೆಡೆ ಭಯೋತ್ಪಾದನೆ ಮತ್ತು ನಕ್ಸಲೈಟ್ ಕೃತ್ಯಗಳು ಆತಂಕವುಂಟು ಮಾಡಿವೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ರಾಷ್ಟ್ರದಲ್ಲಿ ಉಂಟಾಗುತ್ತಿರುವ ಕೋಲಾಹಲ ವಿಷಾದನೀಯ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

  ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

  ಪೌರತ್ವ ತಿದ್ದುಪಡಿ ಕಾಯಿದೆ ನಿನ್ನೆ, ಮೊನ್ನೆಯದ್ದಲ್ಲ. ಅನೇಕ ವರ್ಷಗಳ ಚಿಂತನ, ಮಂಥನದಿಂದ ಮೂಡಿಬಂದಿರುವ ಕಾಯ್ದೆ. ಸಿಎಎ ಸಕಾರಾತ್ಮಕ ಆಲೋಚನೆಯಿಂದ ಕೂಡಿದ ಕ್ರಮವಾಗಿದೆ ಎಂದರು. ಇಂಗ್ಲೆಂಡಿನ ಡೇವಿಡ್, ಕ್ರಿಸ್ಟಿನಾ, ಡಾ.ಅಶೋಕ್ ಕೂಲಂಬಿ, ವಿಕ್ಟೋರಿಯಾ ಇತರರು ಇದ್ದರು.

  ಧ್ವಜಾರೋಹಣ ಕಾರ್ಯಕ್ರಮದ ನಂತರ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿಯ ನೃತ್ಯ ರೂಪಕಗಳು, ವಚನ ನೃತ್ಯ, ರಾಷ್ಟ್ರದ ವೈವಿಧ್ಯತೆಯ ಏಕತೆಯ ನೃತ್ಯಗಳು ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡವು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts