More

    ಚಿಕ್ಕೇನಹಳ್ಳಿ ದುರ್ಗಾಂಬಿಕಾ ಜಾತ್ರೆ

    ಸಿರಿಗೆರೆ: ಸಮೀಪದ ಚಿಕ್ಕೇನಹಳ್ಳಿಯಲ್ಲಿ ಸೋಮವಾರ ಗ್ರಾಮ ದೇವತೆ ದುರ್ಗಾಂಬಿಕಾ ದೇವಿಗೆ ಹೊಳೆ ಪೂಜೆ ನೆರವೇರಿಸುವ ಮೂಲಕ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

    ಜ.21ರಂದು ಮೊದಲಗಿತ್ತಿ ಶಾಸ್ತ್ರ, ಪೂಜಾರ್ ತಿಮ್ಮಪ್ಪ, ಬಿಳಿಚಿ ವಂಶಸ್ಥರು, ಗೌಡ್ರು, ಆಚಾರ್, ತಳವಾರ, ಹಟ್ಟಿ, ಗೊಲ್ಲಗೌಡ, ಅಸಾದಿ, ಮಡಿವಾಳ, ಪಾತಯ್ಯನ ವಂಶಸ್ಥರು, ಉರುಮೆ ವಾದ್ಯದವರು ಮತ್ತು ಗ್ರಾಮಸ್ಥರಿಂದ ಚರಗ ಕಾರ್ಯ ನೆರವೇರುವುದು.

    ಬೆಳಗ್ಗೆ 9ಕ್ಕೆ ಹೊಳೆ ಪೂಜೆ, ನಂತರ ಮದುವಣಗಿತ್ತಿ ಶಾಸ್ತ್ರ, ದೇವಿಗೆ ಹಣ್ಣು ಕಾಯಿ ಎಡೆ ಕೊಡುವ ಶಾಸ್ತ್ರ, ಮುತ್ತೈದೆಯರಿಂದ ಕಳಶ ಪೂಜೆ, ಚರಗ ಚೆಲ್ಲುವ ಕಾರ್ಯಕ್ರಮ ನಡೆಯಲಿದೆ.

    22ರಂದು ಬೇವು ಬೇಟೆ ಕಾರ್ಯಕ್ರಮ, 23ರ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 24ರಂದು ಹೂವಿನ ಪಲ್ಲಕ್ಕಿ ಉತ್ಸವದ ಬಳಿಕ ದೇವಿಯನ್ನು ಗುಡಿ ತುಂಬಿಸುವುದರೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

    ಕೊಂಡಾಲಮ್ಮ ಜಾತ್ರೆಗೆ ಚಾಲನೆ: ಮೊಳಕಾಲ್ಮೂರು ತಾಲೂಕು ಕೊಂಡ್ಲಹಳ್ಳಿಯಲ್ಲಿ ಗ್ರಾಮ ದೇವತೆ ಕೊಂಡಾಲಮ್ಮದೇವಿ ಜಾತ್ರಾ ಮಹೋತ್ಸವವು ಜ.21ರಿಂದ ಮೂರು ದಿನಗಳ ಕಾಲ ಜರುಗಲಿದೆ. 21ರ ಸಂಜೆ 5ಕ್ಕೆ ಭಕ್ತರಿಂದ ಹೂವಿನಹಾರ ತರುವುದು, ರಾತ್ರಿ 8ಕ್ಕೆ ಭಜನೆ, 22ರ ಬೆಳಗ್ಗೆ ಅನ್ನಸಂತರ್ಪಣೆ, 23ರ ಮಧ್ಯಾಹ್ನ 3ಕ್ಕೆ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಕೊಂಡಾಲಮ್ಮದೇವಿ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts