More

    ಅನ್ಯಭಾಷೆಗೆ ಸಿಗುತ್ತಿದೆ ಹೆಚ್ಚು ಮಹತ್ವ

    ಸಿರಗುಪ್ಪ: ಇತ್ತೀಚೆಗೆ ಔದ್ಯೋಗಿಕ ಕಾರಣ ಮತ್ತು ವ್ಯಾಪಾರೀಕರಣಕ್ಕಾಗಿ ಅನ್ಯ ಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಡಾ.ಮದುಸೂಧನ ಕಾರಿಗನೂರು ಹೇಳಿದರು.

    ನಗರದ ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ಸಾಂಸ್ಕೃತಿಕ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಭಾಷಾ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರ’ ಕುರಿತು ವಿದ್ಯಾರ್ಥಿಗಳ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದರು.

    ಎಲ್ಲರೂ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ನಿರ್ಮಾಣವಾಗುವ ಇಂತಹ ವೇದಿಕೆಗಳ ಸದುಪಯೋಗಪಡಿಸಿಕೊಂಡು ಗ್ರಾಮೀಣ ಭಾಗಗಲ್ಲಿನ ಕಲೆ, ಸಂಗೀತ, ಏಕಪಾತ್ರಾಭಿನಯ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಿದಲ್ಲಿ ಗ್ರಾಂಥಿಕ ಭಾಷೆಯ ಜತೆಜತೆಗೆ ಗ್ರಾಮೀಣ ಭಾಷೆಗೂ ಮಹತ್ವ ದೊರೆಯುತ್ತದೆ ಎಂದರು.

    ಪ್ರಾಚಾರ್ಯ ಕೃಷ್ಣಪ್ಪ ನಾಯಕ ಬಸಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಉನ್ನತ ತಂತ್ರಜ್ಞಾನದಿಂದಲೇ ದೇಶಗಳು ಅಭಿವೃದ್ಧಿ ಹೊಂದುತ್ತಿವೆ. ಪ್ರತಿಯೊಂದರಲ್ಲೂ ಅನುಕೂಲ ಮತ್ತು ಅನನುುಕೂಲಗಳಿರುತ್ತವೆ. ಆದರೆ, ವಿದ್ಯಾರ್ಥಿಗಳು ಮಾತೃಭಾಷೆಯ ಜತೆಗೆ ನಿಮಗೆ ಉಪಯುಕ್ತ ಮಾಹಿತಿ ಕಡೆ ಗಮನ ನೀಡಬೇಕು. ಇದರಿಂದ ವಿದ್ಯಾಭ್ಯಾಸದ ಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದರು.

    ಉಪನ್ಯಾಸಕರಾದ ಕೆ.ಎಂ.ಚಂದ್ರಕಾಂತ, ರಾಮಣ್ಣ ಪೂಜಾರಿ, ಬಸಪ್ಪ, ಕಾಳಿಂಗ ನಾಯಕ, ಪಿ.ವಿ.ನಾಗರಾಜ, ಮುತ್ತಯ್ಯ, ರಾಮಕೃಷ್ಣ, ಸಂಯುಕ್ತ ಕುಲಕರ್ಣಿ, ಅಂಬುತಾಯಿ, ಪವನ್ ಕುಮಾರ್, ಜಿ.ಕೊಟ್ರಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts