More

    ವಿಶ್ವೇಶ್ವರಯ್ಯ ದೇಶದ ಹೆಮ್ಮೆಯ ಇಂಜಿನಿಯರ್

    ಚಿತ್ರದುರ್ಗ: ಭಾರತರತ್ನ ಸರ್‍.ಎಂ.ವಿಶ್ವೇಶ್ವರಯ್ಯ ಅವರು ಇಂಜಿನಿಯರ್ ವೃತ್ತಿಯಲ್ಲಿ ಸಲ್ಲಿಸಿದ ಸೇವೆ ದೇಶವೇ ಹೆಮ್ಮ ಪಡುವಂತದ್ದು ಎಂದು ಚಿತ್ರದುರ್ಗದ ವಿಶ್ವೇಶ್ವರಯ್ಯ ಜಲನಿಗಮದ ಮುಖ್ಯ ಇಂಜಿನಿಯರ್ ಎಂ.ರವಿ ಹೇಳಿದರು.

    ಜಿಲ್ಲಾ ಅಭ್ಯಾಸಿ ವಾಸ್ತುಶಿಲ್ಪಿಗಳ ಸಂಘ, ಜಿಲ್ಲಾ ಸಿವಿಲ್ ಇಂಜಿನಿಯರ್‍ಗಳ ಸಂಘದಿಂದ ಗುರುವಾರ ವೈ.ಆರ್.ಆದಿಶೇಷ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ 162ನೇ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ, ಇಂಜಿನಿಯರ್‍ಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ವಿಶ್ವೇಶ್ವರಯ್ಯ ಅವರು ದೇಶ ಮೆಚ್ಚುವಂತ ಮಹಾನ್‍ ಇಂಜಿನಿಯರ್. ಅವರ ಅಪಾರ ಜ್ಞಾನ, ನೈಪುಣ್ಯತೆಯಿಂದಾಗಿ ಉತ್ತಮ ಅಣೆಕಟ್ಟೆಗಳನ್ನು ನಿರ್ಮಿಸಿದ್ದಾರೆ. ಮೈಸೂರು ದಿವಾನರಾಗಿದ್ದ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಕಾರಣರಾದರು. ಶಿಕ್ಷಣಕ್ಕೆ ನೀಡಿದ ಒತ್ತು ಎಂದಿಗೂ ಮರೆಯುವುದಿಲ್ಲ ಎಂದರು.

    ಸರ್‍ಎಂವಿ ಆಗಲೂ ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಅಣೆಕಟ್ಟು, ಕಟ್ಟಡಗಳನ್ನು ಇಂಜಿನಿಯರ್‍ಗಳು ನಿರ್ಮಿಸಬಹುದು. ಸರಳತೆಗೆ ಹೆಸರುವಾಸಿ ಆಗಿದ್ದ ಅವರು ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಸಲಹೆ ನೀಡಿದರು.

    ಸಭಾ ಕಾರ್ಯಕ್ರಮಕ್ಕೂ ಮುನ್ನ ಕನಕ ವೃತ್ತದಿಂದ ವಿಶ್ವೇಶ್ವರಯ್ಯ ಪುತ್ಥಳಿವರೆಗೂ ಬೈಕ್‍ ರ್ಯಾಲಿ ನಡೆಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದರಿನಾಥ್, ರಾಮ್ಕೊ ಸಿಮೆಂಟ್‍ ಲಿಮಿಟೆಡ್‍ ಮಾರುಕಟ್ಟೆಯ ಉಪಪ್ರಧಾನ ವ್ಯವಸ್ಥಾಪಕ ಎಸ್.ರಾಜ್‍ಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ಹಿರಿಯೂರು ಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಚಂದ್ರಮೌಳಿ, ಸಿಡಿ ಪೇಸ್‍ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‍ ಅಧ್ಯಕ್ಷ ಡಾ.ಎಸ್.ವೈ. ಮಧುಸೂದನ್ ರೆಡ್ಡಿ, ರೋಟರಿ ಫೋರ್ಟ್‍ ಟ್ರಸ್ಟ್‍ನ ಅಧ್ಯಕ್ಷ ಎಂ.ಕೆ.ರವೀಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts