More

    ಕಾನೂನಿನ ಮಹತ್ವ ತಿಳಿದುಕೊಳ್ಳಿ

    ಸಿಂಧನೂರು: ಜನರು ಕಾನೂನಿನ ಮಹತ್ವ ತಿಳಿದುಕೊಂಡು, ಅದರಂತೆ ನಡೆದುಕೊಳ್ಳಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದೀಪಾ ಜಿ.ಮನೇರಕರ್ ಹೇಳಿದರು.

    ನಗರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಎಚ್.ಮರಿಯಪ್ಪ ವಕೀಲ ಚಾರಿಟಬಲ್ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನು ಸೇವಾ ಸಮಿತಿಯಿಂದ ಬಡವರು, ನಿರ್ಗತಿಕರು, ಮಹಿಳೆಯರು, ಹಿಂದುಳಿದವರಿಗೆ ಉಚಿತವಾಗಿ ನೆರವು ನೀಡಲಾಗುತ್ತದೆ. ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಕಾನೂನು ತಿಳಿದುಕೊಂಡರೆ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದರು. ವಕೀಲ ಬಿ.ನಿರುಪಾದೆಪ್ಪ ಗುಡಿಹಾಳ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು.
    ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಅಧ್ಯಕ್ಷತೆ ವಹಿಸಿದ್ದರು. ಎರಡನೇ ಹೆಚ್ಚುವರಿ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ, ವಕೀಲರ ಸಂಘದ ಖಜಾಂಚಿ ವೀರಭದ್ರಗೌಡ ಸಾಲ್ಗುಂದಾ, ವಕೀಲರಾದ ಖಾಜಿ ಮಲೀಕ್, ಶೇಖರಪ್ಪ ಧುಮತಿ, ಬಾಬುಸಾಬ್, ಸಮಾಜ ಸೇವಕ ದೌಲಸಾಬ್ ದೊಡ್ಡಮನಿ ಇದ್ದರು. ಎಚ್. ಮರಿಯಪ್ಪ ವಕೀಲ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts