More

    ಅಭಿವೃದ್ಧಿಯಾಗಿದ್ದರೆ ರಸ್ತೆಗೆ ಮರಂ ಹಾಕಲು ಹಣ ಏಕೆ ಕೇಳ್ತಾರೆ ಎಂದು ಪ್ರಶ್ನಿಸಿದ ಶಾಸಕ ವೆಂಕಟರಾವ ನಾಡಗೌಡ

    ಸಿಂಧನೂರು: ಮಾಜಿ ಶಾಸಕರ ಅವಧಿಯಲ್ಲಿ ನಗರ ರಸ್ತೆಗಳು ಅಭಿವೃದ್ಧಿಯಾಗಿದ್ದರೆ, ಈಗ ನಗರಸಭೆ ಅಧ್ಯಕ್ಷರು ನಗರದ ರಸ್ತೆಗಳಿಗೆ ಮರಂ ಹಾಕಲು ಹಣ ಏಕೆ ಕೇಳುತ್ತಿದ್ದಾರೆ. ಅವರ ಅವಧಿಯಲ್ಲಿ 400 ಕೋಟಿ ರೂ. ಅನುದಾನ ತೋರಿಸಲಿ ಎಂದು ಶಾಸಕ ವೆಂಕಟವರಾವ ನಾಡಗೌಡ ಪ್ರಶ್ನಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಂಪನಗೌಡ ಬಾದರ್ಲಿ ನಾಲ್ಕು ಬಾರಿ ಶಾಸಕರಾದರೂ ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ತೋರಿಸಲಿ. ಅವರ ಆಡಳಿತ ಸುವರ್ಣ ಯುಗ ಎಂದು ತಾವೇ ಬೆನ್ನು ತಟ್ಟಿಕೊಂಡರೆ ಸಾಲದು. ಏನು ಕೆಲಸ ಮಾಡಿದ್ದೀರಿ ಎನ್ನುವದನ್ನು ತೋರಿಸಬೇಕು. ಅವರ ಆಡಳಿತಾವಧಿಯಲ್ಲಿ ಮಿನಿ ವಿಧಾನಸೌಧ ಕಟ್ಟಲು ಸಾಧ್ಯವಾಗಲಿಲ್ಲ. ಕ್ಷೇತ್ರಕ್ಕೆ ಹೊರ ಕಚೇರಿ ಮಾಡಲಿಲ್ಲ. ನಾನು ಸರ್ವೇ ಮಾಡಿಸಿದ್ದೇನೆ. 100 ಕೋಟಿ ಅನುದಾನ ಬಂದರೆ ನಗರದಲ್ಲಿ ಒಂದಿಂಚು ರಸ್ತೆ ಸಹ ಉಳಿಯುವುದಿಲ್ಲ. ಎಲ್ಲಾ ಸಿಸಿ ರಸ್ತೆ, ಚರಂಡಿ ಮಾಡಿಸಬಹುದು. ಈಗ ರಸ್ತೆಗಳಿಗೆ ಮಣ್ಣು ಹಾಕಲು ನಗರಸಭಾ ಅಧ್ಯಕ್ಷರು ನನ್ನ ಹತ್ತಿರ ಕೇಳುತ್ತಾರೆ ಎಂದರೆ ಮಾಜಿ ಶಾಸಕರ ಅವಧಿ ಎಂಥ ಅಭಿವೃದ್ಧಿಯಾಗಿದೆ ಎಂಬುದರ ಅರ್ಥ ಮಾಡಿಕೊಳ್ಳಬಹುದು ಎಂದರು.

    ಜೆಡಿಎಸ್ ಅವಕಾಶವಾದಿ ಪಕ್ಷವಲ್ಲ. ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಲಿಗೆ ಹೋಗಿಲ್ಲ. ಕಾಂಗ್ರೆಸ್ಸಿಗರೇ ದೇವೇಗೌಡರ ಮನೆಗೆ ಬಂದಿದ್ದನ್ನು ಮಾಧ್ಯಮಗಳೇ ಬಿತ್ತರಿಸಿದ್ದನ್ನು ನೋಡಿದ್ದಾಗ್ಯೂ ಬಾದರ್ಲಿಯವರು ಆರೋಪ ಮಾಡುವುದರಲ್ಲಿ ಹುರುಳಿಲ್ಲ. ಯಾರಿಗೆ ಅಧಿಕಾರ ನೀಡಬೇಕು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಜೆಡಿಎಸ್ ತಂದೆ-ಮಕ್ಕಳ ಪಕ್ಷ ಎನ್ನುವುದಾದರೆ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್ ತಾನೇ ಎಂದು ಟೀಕಿಸಿದರು.

    ಜೆಡಿಎಸ್ ಮುಖಂಡರಾದ ಧರ್ಮನಗೌಡ ಮಲ್ಕಾಪುರ, ಜಿ.ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಅಶೋಕ ಉಮಲೂಟಿ, ಬಿ.ಶ್ರೀಹರ್ಷ, ಬಾಬುಗೌಡ ರಾಗಲಪರ್ವಿ, ಪಂಪಾರೆಡ್ಡಿ, ನದೀಮ್ ಮುಲ್ಲಾ, ನಗರಸಭಾ ಸದಸ್ಯರಾದ ಡಿ.ಸತ್ಯನಾರಾಯಣ, ಕೆ.ಹನುಮೇಶ ಇತರರಿದ್ದರು.

    ಎರಡು ಅವಧಿಗೆ ನಾನು ಶಾಸಕನಾದರೂ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ. ಉಳಿದ ಸಮಯದಲ್ಲಿ ಅಭಿವೃದ್ಧ್ದಿ ಬಗ್ಗೆ ಚಿಂತನೆ ಮಾಡುವಂತೆ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ. ಹಿಂದೆ ಹಂಪನಗೌಡ, ವಿರೂಪಾಕ್ಷಪ್ಪನವರ ಚುನಾವಣೆ ಸಂದರ್ಭದಲ್ಲಿ ಎಷ್ಟೊಂದು ಪ್ರಕರಣ ದಾಖಲಾಗುತ್ತಿದ್ದವು. ನನ್ನ ಅವಧಿಯಲ್ಲಿ ಎಷ್ಟು ಆಗಿವೆ ದಾಖಲೆಗಳನ್ನು ನೋಡಿ ಬಾದಿರ್ಲಿ ಹೇಳಿಕೆ ನೀಡಲಿ.
    | ವೆಂಕಟರಾವ ನಾಡಗೌಡ ಶಾಸಕ ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts