More

    ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದ್ಬಳಕೆಗೆ ಮಾಡಿಕೊಳ್ಳುವಂತೆ ಶಾಸಕ ವೆಂಕಟರಾವ ನಾಡಗೌಡ ಸಲಹೆ

    ಸಿಂಧನೂರು: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸರ್ಕಾರ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕಲ್ಪಿಸಲಾಗುತ್ತಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ಸಾಸಲಮರಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಜನರು ಸರ್ಕಾರಿ ಇಲಾಖೆಗಳಿಗೆ ಹೋಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮಧ್ಯವರ್ತಿಗಳಿಗೆ, ಅಧಿಕಾರಿಗಳಿಗೆ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬಾರದು. ಅಧಿಕಾರಿಗಳು ಲಂಚ ಪಡೆದು ಜನರ ಕೆಲಸಗಳನ್ನು ಮಾಡಿಕೊಡುವುದನ್ನು ಬಿಡಬೇಕು. ಜನಸೇವೆಯೇ ಜನಾರ್ದನ ಸೇವೆಯೆಂದು ಭಾವಿಸಬೇಕು ಎಂದರು.

    ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಪ್ರತಿ ತಿಂಗಳು ಮೂರನೇ ಶನಿವಾರ ಈ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆಯ ಒಂದು ತಾಲೂಕಿನ ಹಳ್ಳಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿದರೆ, ಇನ್ನುಳಿದ ತಾಲೂಕುಗಳ ತಹಸೀಲ್ದಾರ್ ತಮ್ಮ ವ್ಯಾಪ್ತಿ ಹಳ್ಳಿಯೊಂದರಲ್ಲಿ ಕಾರ್ಯಕ್ರಮ ಆಯೋಜಿಸಿ, ಸ್ಥಳದಲ್ಲಿಯೇ ವಿವಿಧ ಇಲಾಖೆಗಳ ಸೇವೆಗಳನ್ನು ನೀಡಲಿದ್ದಾರೆ. ಜತೆಗೆ ಅರ್ಜಿಗಳನ್ನು ವಿಲೇವಾರಿ ಮಾಡಲಿದ್ದಾರೆ ಎಂದರು.


    ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ ಬಿ.ಪಾಟೀಲ್, ತಾಪಂ ಇಒ ಪವನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಗ್ರಾಪ ಅಧ್ಯಕ್ಷ ನಾಗಲಿಂಗಪ್ಪ, ಸದಸ್ಯ ನಾಗರಾಜ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    ಸಮಸ್ಯೆಯ ಸುರಿಮಳೆ: ಸಭೆ ಆರಂಭಿಸುತ್ತಿದ್ದಂತೆ ಗ್ರಾಮದ ಜನರು ಕಂದಾಯ ಇಲಾಖೆಯ ಸರ್ವೇ, ಪಹಣಿ ತಿದ್ದುಪಡಿ, ಪೋತಿ, ಚರಂಡಿ, ಮಹಿಳಾ ಶೌಚಗೃಹ, ನೀರು ಸೇರಿ ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಪರಿಹರಿಸುವಂತೆ ಒತ್ತಡ ಹಾಕಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕ, ತಹಸೀಲ್ದಾರ ಈ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು.

    ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸದ್ಬಳಕೆಗೆ ಮಾಡಿಕೊಳ್ಳುವಂತೆ ಶಾಸಕ ವೆಂಕಟರಾವ ನಾಡಗೌಡ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts