More

    ರಾಹುಲ್‌ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಮೌನ ಪ್ರತಿಭಟನೆ

    ಬಳ್ಳಾರಿ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸುಧಾಕ್ರಾಸ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

    ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇಡೀ ರಾಷ್ಟ್ರವೇ ಖಂಡಿಸುತ್ತದೆ ಮತ್ತು ಅವರ ಹೋರಾಟದ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು. ರಾಹುಲ್ಗಾಂಧಿ ಅವರು ಏಕಾಂಗಿಯಲ್ಲ, ಅಪಾರ ಕಾಂಗ್ರೆಸ್ಸಿಗರು ಮತ್ತು ಕೋಟ್ಯಂತರ ಜನರು ಅವರ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಸತ್ಯ ಮತ್ತು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮೌನಪ್ರತಿಭಟನೆ ನಂತರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಪ್ರಶ್ನಿಸುತ್ತಿರುವುದು ಹಾಗೂ ಅವರ ನಿರ್ಭೀತ ನಡವಳಿಕೆಯನ್ನು ಸಹಿಸಿಕೊಳ್ಳದೆ ಮೋದಿ ಅವರು ರಾಹುಲ್‌ಗಾಂಧಿ ಅವರ ಮೇಲೆ ಅನರ್ಹತೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಇದು ಸೇಡಿನ ರಾಜಕಾರಣ. ರಾಹುಲ್‌ಗಾಂಧಿ ಅವರ ಅನರ್ಹತೆ ಕುಡಿತು ಸಲ್ಲಿಸಿದ ಅರ್ಜಿ ವಜಾ ಮಾಡಿರುವ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಇಂತಹ ಕುತಂತ್ರದಿಂದ ಕಾಂಗ್ರೆಸ್ ಅನ್ನು ಸೋಲಿಸಲು ಆಗುವುದಿಲ್ಲ. ದೇಶದ ಜನರಿಗೆ ಮನವರಿಕೆ ಆಗುತ್ತಿದೆ. ನ್ಯಾಯ ಮತ್ತು ಸತ್ಯದ ದರ್ಶನವಾಗುತ್ತಿದೆ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

    ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಬಿ.ಜಾನಕಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕಮಲಾ ಮರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ನೋಹ ವಿಲ್ಸನ್, ಡಿ.ಅಯಾಜ್ ಅಹಮ್ಮದ್, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಕೆ.ಬಿ.ಗೋಪಿ ಕೃಷ್ಣ, ವಿ.ಅರುಣ ಕುಮಾರ್, ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಜಿ.ಎಸ್.ಈರನಗೌಡ, ಎಂ.ಪಿ.ಕಮಲಾ, ವೆಂಕಟಲಕ್ಷ್ಮಿ ನಾರಾಯಣ, ಪೆರಂ ವಿವೇಕ್, ಮೀನಳ್ಳಿ ಚಂದ್ರಶೇಖರ್, ಎಂ.ಎಸ್.ಮಂಜುಳಾ, ಚಾಂದ್‌ಬಾಷಾ, ಅಲಿವೇಲು ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts