More

    ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಗುಟುರು


    ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಪ್ರಧಾನಿ ಬಗ್ಗೆ ಬಳಸುತ್ತಿರುವ ಕೀಳುಮಟ್ಟದ ಶಬ್ದಗಳು ಆಕ್ಷೇಪಾರ್ಹ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಬೇಕೆಂಬುದು ನಿಜ. ಆದರೆ ಕೇಳಲು ವಿಧಾನಗಳಿವೆ. ಪ್ರಧಾನಿಯನ್ನು ಕೀಳುಮಟ್ಟದಲ್ಲಿ ಆಗ್ರಹಿಸುವುದು ಸರಿಯಲ್ಲ ಎಂದು ಹೇಳಿದರು.

    ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿಯವರನ್ನು ಭೇಟಿಯಾಗಿ ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ. ನಾನು ಕೂಡ ವೈಯಕ್ತಿಕವಾಗಿ ಪ್ರಧಾನಿಯವರನ್ನು ಅನುದಾನಕ್ಕೆ ಆಗ್ರಹಿಸುತ್ತೇನೆ. ಆಡಳಿತ ಕಳೆದು ಕೊಂಡ ಬಳಿಕ ಸಿದ್ದರಾಮಯ ವಿವೇಚನೆ ಮರೆತಿದ್ದಾರೆ. ಹೀಗಾಗಿ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದರು.

    ಹಿಂದೆ ರಾಜ್ಯದಲ್ಲಿ ಬರ ಬಂದ ಸಂದರ್ಭದಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಆಗ ಸಿದ್ದರಾಮಯ್ಯ ಎಷ್ಟು ಅನುದಾನ ತಂದಿದ್ದರು ಎಂದು ಈಶ್ವರಪ್ಪ ಪ್ರಶ್ನಿಸಿದರು.

    ಪ್ರಧಾನಿ ಮೋದಿ ಹಾಗೂ ವಿಭೂತಿ ರುದ್ರಾಕ್ಷಿ ಸರ ಧರಿಸಿದ ಬಗ್ಗೆ ಕೇಳಿಬರುತ್ತಿರುವ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ, ನಾವು ಬಿಜೆಪಿಯವರು ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವರು. ನಮ್ಮ ನಡತೆ ಮೂಲಕ ಧರ್ಮವನ್ನು ಇನ್ನಷ್ಟು ಸಶಕ್ತಗೊಳಿಸುವ ಎಂದರು.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಾನು ಈಗಲೇ ಏನನ್ನು ಹೇಳುವುದಿಲ್ಲ. ಚರ್ಚೆಗಳು ನಡೆಯುತ್ತಿವೆ ಕಾದು ನೋಡೋಣ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts