More

    14ರಿಂದ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

    ಚಿತ್ರದುರ್ಗ: ನಗರದಲ್ಲಿ ವೀರವನಿತೆ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ಜ.14ರಿಂದ ಎರಡು ದಿನಗಳ ಕಾಲ 15,17 ವರ್ಷದೊಳಗಿನ ಬಾಲಕ,ಬಾಲಕಿಯರ, ಪುರುಷ ಮತ್ತು ಮಹಿಳೆಯರ ಹಾಗೂ 45 ವರ್ಷ ಮೇಲಿನ ಪುರುಷರ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಗೆಳೆಯರ ಬಳಗದ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,15ರಿಂದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್, ಡಬಲ್ಸ್,ಪುರುಷರ ಮತ್ತು ಮಹಿಳೆಯರ ಡಬಲ್ಸ್ ಓಪನ್ ಹಾಗೂ 45 ವರ್ಷ ಮೇಲಿನ ಪುರುಷರ ಡಬಲ್ಸ್ ಪಂದ್ಯಾವಳಿ ನಡೆಯಲಿವೆ. ಸಿಂಗಲ್ಸ್‌ಗೆ 300 ರೂ.ಹಾಗೂ ಡಬಲ್ಸ್‌ಗೆ 600 ರೂ.ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.

    ರಾಜ್ಯದ ವಿವಿಧೆಡೆಗಳಿಂದ 160 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು,ಈವರೆಗೆ 70 ತಂಡಗಳು ನೋಂದಾಯಿಸಿಕೊಂಡಿವೆ. 14 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಜಿ.ಪಂ ಸಿಇಒ ದಿವಾಕರ್ ಉಪಸ್ಥಿತ ರಿರುವರು. 15 ರಂದು ಸಂಜೆ 5 ಗಂಟೆಗೆ ಏರ್ಪಡಿಸಿರುವ ಸಮಾರೋಪ ಸಮಾರಂಭದಲ್ಲಿ ಎಸ್‌ಪಿ ಪರಶುರಾಮ್ ಭಾಗವಹಿಸಲಿದ್ದಾರೆ ಎಂದರು. ಮಲ್ಲಿಕಾರ್ಜನ್,ಸೋಮಣ್ಣ, ಗುರು,ಕುಮಾರಸ್ವಾಮಿ,ಮನಿಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts