More

    ಜು. 5ರಿಂದ ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ

    ಶೃಂಗೇರಿ: ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಜು. 5ರಂದು ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ.

    ಚಾತುರ್ಮಾಸ್ಯ ಸಂಕಲ್ಪದ ಮೊದಲು ವ್ಯಾಸಪೂಜೆ ನೆರವೇರಿಸಲಾಗುತ್ತದೆ. ಈ ಪೂಜೆಯನ್ನು ಮೂರು ಗುಂಪುಗಳ ಆಚಾರ್ಯರಿಗೆ ಸಲ್ಲಿಸಲಾಗುತ್ತದೆ. ಈ ಗುಂಪುಗಳಿಗೆ ಕೃಷ್ಣಪಂಚಕ, ವ್ಯಾಸಪಂಚಕ ಮತ್ತು ಶಂಕರಾಚಾರ್ಯ ಪಂಚಕಗಳು ಎಂದು ಹೆಸರು. ಈ ಮೂರು ಪಂಚಕಗಳಿಗೆ ಯತಿವರ್ಯರು ಪ್ರತ್ಯೇಕವಾಗಿ ಪೂಜೆ ಸಲ್ಲಿಸುವರು. ಶೃಂಗೇರಿ ಜಗದ್ಗುರು ಪರಂಪರಾ ಸ್ತೋತ್ರವನ್ನು ಪಠಿಸುತ್ತ ಗುರುಪರಂಪರೆಯಲ್ಲಿ ಬಂದ ಯತಿವರೇಣ್ಯರಿಗೆ ಪೂಜೆ ಸಲ್ಲಿಸಲಾಗುತ್ತದೆ.

    ಇದನ್ನೂ ಓದಿ:ಗುಡ್ ನ್ಯೂಸ್…! ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ ಈ ರಾಜ್ಯ

    ಚಾತುರ್ಮಾಸ್ಯದ ಅವಧಿಯಲ್ಲಿ ಗುರುನಿವಾಸದಲ್ಲಿ ಜಗದ್ಗುರುಗಳು ಹಲವು ವಿಶೇಷ ವ್ರತಪೂಜೆ ನಡೆಸುವರು. ಜು.6ರಂದು ಉತ್ತರ ಪೂಜೆ, ಜು.27ರಂದು ಶ್ರಾವಣ ಸೋಮವಾರ ಪೂಜೆ, ಜು.31ಕ್ಕೆ ಶ್ರೀ ವರಲಕ್ಷ್ಮೀ ವ್ರತ, ಆ.11ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಆ.21ರಂದು ಗೌರಿವ್ರತ, ಆ.22ರಂದು ಶ್ರೀ ವಿನಾಯಕ ಚತುರ್ಥಿ ಹಾಗೂ ಶ್ರೀ ಮಹಾಗಣಪತಿ ವಾಕ್ಯಾರ್ಥ ಸಭಾ, ಆ.27ರಂದು ಶ್ರೀ ಕೇದಾರನಾಥಶ್ವೇರ ವ್ರತ, ಆ.29ರಂದು ಶ್ರೀ ವಾಮನ ಜಯಂತಿ, ಸೆ.1ರಂದು ಶ್ರೀ ಅನಂತಪದ್ಮನಾಭ ವ್ರತ ಹಾಗೂ ಉಮಾಮಹೇಶ್ವರ ವ್ರತ, ಸೆ.2ರಂದು ಚಾತುರ್ಮಾಸ್ಯ ವ್ರತ ಮುಕ್ತಾಯ, ಸೆ.3ರಂದು ಶ್ರೀ ಮಹಾಗಣಪತಿ ವಾಕ್ಯಾರ್ಥ ಸಭಾ ಮುಕ್ತಾಯ ನೆರವೇರಲಿದೆ.

    ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ 28ನೇ ವರ್ಧಂತಿ ಮಹೋತ್ಸವ ಜು. 25ರಂದು ನೆರವೇರಲಿದೆ. ಈ ಪ್ರಯುಕ್ತ ಕಿರಿಯ ಶ್ರೀಗಳು ಜು.24ರ ಮಧ್ಯಾಹ್ನ ಶ್ರೀ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಹಾಗೂ ಜು.25ರಂದು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವರು.

    ರಾಜ್ಯದಲ್ಲಿ ಮತ್ತೊಮ್ಮೆ ಲಾಕ್​ಡೌನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts