More

    ಡಾ. ತೋಂಟದ ಸಿದ್ಧರಾಮ ಸ್ವಾಮಿಜಿ ಅಭಿಪ್ರಾಯ; ಅಥಣಿ ಶಿವಯೋಗಿಗಳ ಕಾರ್ಯ ಅಜರಾಮರ

    ಧಾರವಾಡ: ಮಾನವನ ನೈತಿಕ ಮËಲ್ಯಗಳು ಹಳಸುತ್ತಿರುವ ಕಾಲದಲ್ಲಿ ಸದಾಚಾರ ತಳಹದಿಯ ಮೇಲೆ ನಿರ್ಮಿತವಾದ ಬಸವಾದಿ ಪ್ರಮಥರ ತತ್ವಗಳ ಅರಿವು ಮೂಡಿಸಿ, ಮಾನವನನ್ನು ದೇವ ಮಾನವನನ್ನಾಗಿಸುವ ಮಹತ್ತರ ಕೆಲಸವನ್ನು ಅಥಣಿ ಮಹಾಶಿವಯೋಗಿಗಳು ಮಾಡಿದರು ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಜಿ ಹೇಳಿದರು.
    ನಗರದ ಮುರುಘಾಮಠದ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ೯೪ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೦೨೪ನೇ ಸಾಲಿನ ಶ್ರೀ ಮೃತ್ಯುಂಜಯ ಮಹಾಂತ' ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮಹಾವೀರ, ಏಸುಕ್ರಿಸ್ತ, ಬಸವಣ್ಣನವರು, ಬುದ್ಧ, ಗುರುನಾನಕರು ಶೋಷಣೆಯನ್ನು ಽಕ್ಕರಿಸಿ ಸಮಾಜೋದ್ಧಾರ ಕಾರ್ಯ ಮÁಡಿ ಮÁನವೀಯ ಧರ್ಮ ಸ್ಥಾಪಿಸಿದ್ದಾರೆ. ಬಸವಾದಿ ಶರಣರ ವಚನ ಹಾಗೂ ಅವರ ತತ್ವ ಸಿದ್ಧಾಂತಗಳ ಪಾಲನೆ ಮಾಡಿದ ಮಠಾಽÃಶರು ಅನೇಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಮಠಾಽÃಶರು ಹಸಿದವನಿಗೆ ಉಣಬಡಿಸಿ ಅಕ್ಷರದ ಜೊತೆಗೆ ಜ್ಞಾನ ನೀಡಿದ್ದಾರೆ. ಈ ಕಾರ್ಯ ಮಾಡಿದವರಲ್ಲಿ ಮೃತ್ಯುಂಜಯಪ್ಪಗಳು ಮೊದಲಿಗರು ಎಂದರು. ಬೀದರ ಜಿಲ್ಲೆಯ ಹಾರಕೂಡ ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ೨೫,೦೦೦ ನಗದು, ೧೦ ಗ್ರಾಂ ಚಿನ್ನ ಸಹಿತಶ್ರೀ ಮೃತ್ಯುಂಜಯ- ಮಹಾಂತ ಪ್ರಶಸ್ತಿಯನ್ನು ಮುರುಘಾಮಠದ ಪೀಠಾಧ್ಯಕ್ಷ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಪ್ರದಾನ ಮಾಡಿದರು.
    ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿದರು.
    ನಾಗರಾಜ ಗೌರಿ, ನಾಗರಾಜ ಪಟ್ಟಣಶೆಟ್ಟಿ, ಶಿವಶಂಕರ ಹಂಪಣ್ಣವರ, ಡಿ.ಬಿ. ಲಕಮನಹಳ್ಳಿ, ಡಾ. ಶಂಭು ಹೆಗಡಾಲ, ಇತರರಿದ್ದರು.
    ಎಂ.ಎಸ್. ಗಾಣಿಗೇರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts