More

    ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಸಂಪನ್ನ

    ವಿರಾಜಪೇಟೆ: ಪಟ್ಟಣದಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ 80ನೇ ವರ್ಷದ ತೆರೆ ಮಹೋತ್ಸವವು ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡಿತು.

    ಮೊದಲ ದಿನ ಗಣಪತಿ ಹೋಮ, ಧ್ವಜಾರೋಹಣ, ದೇವಾಲಯದ ಮಹಾದ್ವಾರದ ಉದ್ಘಾಟನೆ ನಡೆಯಿತು. ಎರಡನೇ ದಿನ ವೇದ ಕಲಶದೊಂದಿಗೆ ತಾಲಪ್ಪೊಲಿ ಮೆರವಣಿಗೆ ಚಂಡೆ ಮೇಳದೊಂದಿಗೆ ತೆಲುಗರ ಬೀದಿಯಿಂದ ಹೊರಟು ಮುತ್ತಪ್ಪ ದೇವಸ್ಥಾನದವರೆಗೆ ನಡೆಯಿತು. ಕುಟ್ಟಿಚಾತನ್, ಗುಳಿಗನ್, ವಸುರಿಮಾಲಾ, ಪೊದಿ, ವಿಷ್ಣುಮೂರ್ತಿ ವೆಳ್ಳಾಟಂ ತೆರೆಗಳು ನಡೆದವು.

    ಕೊನೆಯ ದಿನ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲಗಳು ನಡೆದವು. ನಂತರ ತಿರುವಪ್ಪ, ಭಗವತಿ ಪೊದಿ ತೆರೆಗಳು, ವಸುರಿಮಲ, ವಿಷ್ಣುಮೂರ್ತಿ ತೆರೆಗಳು ನಡೆಯಿತು. ಸಂಜೆ ವಿಷ್ಣುಮೂರ್ತಿ ವಾರಣದೊಂದಿಗೆ ಉತ್ಸವ ಸಂಪನ್ನಗೊಂಡಿತು. ಮೂರು ದಿನವೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts