ನಾಗವಳ್ಳಿಯಲ್ಲಿ ಸೋಲಾರ್ ದೀಪ ವಿತರಣೆ

31 SGR 01
ಸಾಗರ ತಾಲೂಕಿನ ಭಾರಂಗಿ ಹೋಬಳಿಯ ನಾಗವಳ್ಳಿಯ ಸೌತಿಕೆರೆ ಮರಾಠಿ ಸಮುದಾಯದ ಕುಟುಂಬಕ್ಕೆ ಸಾಗರ ಎಜುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯಿಂದ ಸೋಲಾರ್ ದೀಪ ವಿತರಿಸಲಾಯಿತು. ಸಂತೋಷ್ ಲಿಂಗನಮಕ್ಕಿ, ವಿದ್ಯಾಶ್ರೀ, ಮಾನಸಾ ಇತರರಿದ್ದರು.
Published on

ಸಾಗರ: ಕುಗ್ರಾಮಗಳ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಬೆಳಕು ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಾಗರ ಎಜುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆ ಮುಖ್ಯಸ್ಥ ಸಂತೋಷ್ ಲಿಂಗನಮಕ್ಕಿ ಹೇಳಿದರು.

ತಾಲೂಕಿನ ಭಾರಂಗಿ ಹೋಬಳಿ ನಾಗವಳ್ಳಿಯ ಸೌತಿಕೆರೆ ಮರಾಠಿ ಸಮುದಾಯದ 50 ಕುಟುಂಬಕ್ಕೆ ಸಾಗರ ಎಜುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯಿಂದ ಉಚಿತವಾಗಿ ಸೋಲಾರ್ ದೀಪ ವಿತರಿಸಿ ಮಾತನಾಡಿ, ಬುಡಕಟ್ಟು ಸಮುದಾಯದವರು ಹೆಚ್ಚು ವಾಸವಿದ್ದು, ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಸಂಸ್ಥೆ ಜತೆಗೆ ಬೆಂಗಳೂರಿನ ಗುಡೇರಾ ಸಂಸ್ಥೆ ಕೈಜೋಡಿಸಿದೆ ಎಂದು ತಿಳಿಸಿದರು.

ಸಂಸ್ಥೆಯಿಂದ 35 ಗ್ರಾಮದ ಸರ್ಕಾರಿ ಶಾಲೆಗಳ 1,200ಕ್ಕೂ ಹೆಚ್ಚು ಮಕ್ಕಳಿಗೆ, 15 ಗ್ರಾಮಗಳ 550 ಕುಟುಂಬಗಳಿಗೆ ಸೋಲಾರ್ ದೀಪ ನೀಡಲಾಗಿದೆ. ಮಕ್ಕಳಿಗೆ ರಾತ್ರಿ ಓದಲು ಸಹಕಾರಿಯಾಗಲಿದೆ. ಭಾರಂಗಿ ಹೋಬಳಿಯಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತಿದೆ. ಸರ್ಕಾರ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ವಿದ್ಯಾಶ್ರೀ, ಮಾನಸಾ, ಮುಖ್ಯಶಿಕ್ಷಕಿ ವಿನೋದಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರ, ಪ್ರಮುಖರಾದ ರಮೇಶ್, ಗೌತಮ್, ಸುಲೋಚನಾ, ಗಿರಿಜಾ, ಕಾಂತರಾಜ್, ಗಣಪತಿ, ಶಂಕರ್, ನಾರಾಯಣ, ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net