More

    ಒಂದು ರೂ. ದೇಣಿಗೆ ಮೂಲಕ ವಿದ್ಯಾರ್ಥಿಗಳ ಮಾದರಿ ಕಾರ್ಯ

    ಶಿವಮೊಗ್ಗ: ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಿಎಸ್‌ಆರ್ ಮಾದರಿಯಲ್ಲಿ ಬಿಎಸ್‌ಆರ್(ಬಿಜಿನೆಸ್ ಸ್ಕೂಲ್ ರೆಸ್ಪಾನ್ಸಿಬಿಲಿಟಿ) ನಿಧಿ ಸ್ಥಾಪನೆ ಮಾಡಿದ್ದಾರೆ. ಈ ನಿಧಿಗೆ ಪ್ರತಿದಿನ ಒಂದು ರೂ. ನೀಡಲಾಗುತ್ತದೆ. ಬಳಿಕ ಅದೆಲ್ಲವನ್ನೂ ಒಗ್ಗೂಡಿಸಿ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಪ್ರಾಚಾರ್ಯ ಡಾ. ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
    ಸೋಮಿನಕೊಪ್ಪದಲ್ಲಿ ನೋವಾ ಟ್ರಸ್ಟ್‌ನವರು ನಡೆಸುತ್ತಿರುವ ತಾಯಿ ಮಡಿಲು ವೃದ್ಧಾಶ್ರಮ ಮತ್ತು ಮಾನಸಿಕ ತೊಂದರೆಗಳಗಾದವರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹೀಗೆ ಸಂಗ್ರಹವಾದ ಹಣದ ಪೈಕಿ ಕೆಲ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.
    ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಮಾದರಿಯಾಗಿದೆ. ಸಮಾಜದಿಂದ ಪಡೆದಿರುವುದರ ಪೈಕಿ ಸ್ವಲ್ಪವಾದರೂ ಸಮಾಜಕ್ಕೆ ಮರಳಿ ಕೊಡುವುದು ಒಳ್ಳೆಯ ಕೆಲಸ. ಇದರಿಂದ ಸಾಮಾಜಿಕ ಸಮತೋಲನ ಸಾಧ್ಯವಾಗಲಿದೆ ಎಂದು ಡಾ. ಕೆ.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.
    ಎಂಬಿಎ ವಿಭಾಗದ ನಿರ್ದೇಶಕ ಡಾ. ಶ್ರೀಕಾಂತ್, ಉಪನ್ಯಾಸಕಿ ಸಿ.ಕೆ.ಅನುರಾಧಾ, ಡಾ. ಪಿ.ಎಸ್.ಸುಭದ್ರಾ, ಡಾ. ಡಿ.ಕೆ.ವಿಕ್ರಮ್, ಸಹಪ್ರಾಧ್ಯಾಪಕರಾದ ಡಾ. ಬಿ.ವಿ.ಶ್ರೀನಿವಾಸಮೂರ್ತಿ, ಡಾ. ಸಂತೋಷ, ಡಾ. ವಿ.ವಿಕ್ರಮ್, ಡಾ. ಜಿ.ಪಿ.ನಾಗೇಶ್, ಡಾ. ಹರ್ಷ, ಪ್ರವೀಣ್‌ಕುಮಾರ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts