ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ

16bdvt1
ಬಿ.ವೈ.ರಾಘವೇಂದ್ರ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಭದ್ರಾವತಿಯ ವಿವಿಧ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಬ್ಯಾಗ್ ಸೇರಿದಂತೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಜಿ.ಧರ್ಮಪ್ರಸಾದ್, ಕೂಡ್ಲಿಗೆರೆ ಹಾಲೇಶ್, ಕೆ.ಎಚ್.ತೀರ್ಥಯ್ಯ ಇತರರಿದ್ದರು.
Published on

ಭದ್ರಾವತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಜನ್ಮದಿನ ಅಂಗವಾಗಿ ನಗರದ ಬಿ.ವೈ.ರಾಘವೇಂದ್ರ ಅಭಿಮಾನಿ ಬಳಗ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದ ಹೊಸಮನೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಿ.ವೈ.ರಾಘವೇಂದ್ರ ಅವರು ಕ್ಷೇತ್ರದ ಸರ್ವ ಸಮಾಜದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದು ಅವರ ಭವಿಷ್ಯವೂ ಕೂಡ ಪ್ರಜ್ವಲಿಸಲಿ, ಕೇಂದ್ರ ಸಚಿವರಾಗುವ ಭಾಗ್ಯ ದೊರೆಯುವಂತಾಗಲಿ ಹಾಗೂ ಅವರ ಕುಟುಂಬ ವರ್ಗ ನೆಮ್ಮದಿ ಜೀವನ ನಡೆಸಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.

ತಾಲೂಕಿನ ಕೆಲ ಶಾಲೆಗಳಿಗೆ ಬ್ಯಾಗ್, ಪಠ್ಯ ಲೇಖನ ಸಾಮಗ್ರಿಗಳನ್ನು ನಗರ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್‌ವಿತರಿಸಿದರು. ಕೆ.ಎಚ್.ತೀರ್ಥಯ್ಯ ಹಾಗೂ ಬಿಜೆಪಿ ಮುಖಂಡ ಕೂಡ್ಲಿಗೆರೆ ಹಾಲೇಶ್ ಮಕ್ಕಳಿಗೆ ಸಿಹಿ ವಿತರಿಸಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಅಂಗವಾಗಿ ಶಾಲಾ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದರು.

ಪ್ರಮುಖರಾದ ಜಿ.ಆನಂದ್, ಮಂಗೋಟೆ ರುದ್ರೇಶ್, ಮಂಜಣ್ಣ, ಚನ್ನೇಶ್, ಅಣ್ಣಪ್ಪ, ಹನುಮಂತ ನಾಯ್ಕ, ರಘುರಾವ್, ಸರಸ್ವತಿ, ಧನುಷ್, ರಾಜು ರೇವಣಕರ್, ಶ್ರೀನಾಥ್, ಕಾ.ರಾ.ನಾಗರಾಜ್, ಸುರೇಶಪ್ಪ, ರವಿಕುಮಾರ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net