More

    ಮಾಂಡೌಸ್ ಎಫೆಕ್ಟ್: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅನಾರೋಗ್ಯ ಭೀತಿ

    ಶಿವಮೊಗ್ಗ: ಕಳೆದ ಮೂರ‌್ನಾಲ್ಕು ದಿನಗಳಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಉಂಟಾಗಿದೆ. ಹೆಚ್ಚಿನ ಮಂದಿ ಜ್ವರ, ಶೀತ, ಕೆಮ್ಮು, ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಒಳರೋಗಿಗಳ ದಾಖಲಾತಿಯಲ್ಲಿ ಹೆಚ್ಚಳವಾಗಿಲ್ಲವಾದರೂ ಹೊರ ರೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ.
    ಒಂದು ವಾರದಿಂದ ಶೀತ, ಜ್ವರ, ಕೆಮ್ಮು, ಅತಿಯಾದ ಜ್ವರ, ಮೈ-ಕೈ ನೋವಿನಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಶಾಲೆಯಲ್ಲಿ ಮಕ್ಕಳಿಂದ ಮಕ್ಕಳಿಗೆ ಜ್ವರ ಹರಡುತ್ತಿರುವುದು ಶಿಕ್ಷಕರು ಹಾಗೂ ಪಾಲಕರಿಗೆ ಸವಾಲಾಗಿದೆ. ಕರೊನಾ ಸಂದರ್ಭದಲ್ಲಿ ಜನರು ವಹಿಸುತ್ತಿದ್ದ ಮುನ್ನೆಚ್ಚರಿಕೆಯಿಂದ ಹವಾಮಾನ ಏರಿಳಿತದ ಸಂದರ್ಭದಲ್ಲೂ ಈ ಪರಿಯಾದ ಶೀತ, ಜ್ವರ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ಜನರ ನಿರ್ಲಕ್ಷೃ ಕೂಡಾ ಕಾಯಿಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
    ಮಂಗಳವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರ ಸಂದರ್ಶನಕ್ಕಾಗಿ ರೋಗಿಗಳ ಸರದಿ ಸಾಲು ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿತು. ಔಷಧ ವಿತರಣೆಗಳ ಕೌಂಟರ್‌ಗಳೆಲ್ಲವೂ ಕಾರ್ಯನಿರ್ವಹಿಸಿದರೂ ಔಷಧ ಪಡೆಯಲು ರೋಗಿಗಳು ಅರ್ಧ ತಾಸು ಕಾಯುವ ಪರಿಸ್ಥಿತಿಯಿತ್ತು. ಈ ಪ್ರಮಾಣದ ರೋಗಿಗಳನ್ನು ನಿರೀಕ್ಷಿಸದ ಮೆಗ್ಗಾನ್ ಸಿಬ್ಬಂದಿ ಸಮರ್ಪಕ ಸೇವೆ ಒದಗಿಸಲು ಹೆಣಗಾಡಬೇಕಾಯಿತು.
    ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನ ಕೆಲವೆಡೆ ಭಾನುವಾರ ವ್ಯಾಪಕ ಮಳೆಯಾಗಿದೆ. ಉಳಿದ ಕಡೆಗಳಲ್ಲಿ ಜಿಟಿಜಿಟಿ ಮಳೆ ಬಿದ್ದಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚುವ ಸಂದರ್ಭವೇ ಹೆಚ್ಚು. ಆ ಮೂಲಕ ಸಾಂಕ್ರಾಮಿಕ ರೋಗಗಳಾದ ಡೆಂೆ, ಚಿಕೂನ್‌ಗುನ್ಯ ತಗುಲುವ ಅಪಾಯವೂ ಇದೆ.

     

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts