More

    ಜ.16ರಿಂದ ಐದು ದಿನ ಅಥರ್ವಣ ಸಂಹಿತಾಯಾಗ: ನಟರಾಜ್ ಭಾಗವತ್

    ಶಿವಮೊಗ್ಗ: ಯುವ ಜನಾಂಗ ಮತ್ತು ವಿದ್ಯಾರ್ಥಿಗಳಿಗೆ ಪಾರಂಪರಿಕ ವೇದಗಳ ಪರಿಚಯವಾಗಲಿ ಎಂಬ ಉದ್ದೇಶದಿಂದ ಅಥರ್ವಣ ಸಂಹಿತಾಯಾಗವನ್ನು ಜ.16ರಿಂದ 20ರವರೆಗೆ ಬಿ.ಎಚ್.ರಸ್ತೆಯ ಬಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ತಿಳಿಸಿದರು.
    ಐದು ದಿನ ಯಾಗ ನಡೆಯಲಿದ್ದು ಪ್ರತಿದಿನ ಸಂಹೆ 5.45ಕ್ಕೆ ಯಾಗ ಮಂಟಪದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಮತ್ತು 6.30ರಿಂದ ಮಹಾಭಾರತದ ಆಯ್ದ ಪಾತ್ರಗಳ ಕುರಿತು ವಿದ್ವಾಂಸದರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಜ.16ರಂದು ಬೆಳಗ್ಗೆ 11ಕ್ಕೆ ಸೋಂದಾ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಭಕ್ತರನ್ನು ಅನುಗ್ರಹಿಸುವರು. ಅಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಗುವುದು. 20ರಂದು ಯಾಗದ ಮಹಾಪೂರ್ಣಾಹುತಿ ನಡೆಯಲಿದೆ. ಶ್ರೀ ಶ್ರೀಧರ ಅಡಿ ಗೋಕರ್ಣ ಅವರು ಪ್ರಧಾನ ಆಚಾರ್ಯತ್ವವನ್ನು ವಹಿಸುವರು. ಶ್ರೀ ಪಂಜಾಭಾಸ್ಕರ ಭಟ್ಟರು ಸಂಹಿತಾಯಾಗದ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದರು.
    ಪ್ರತಿದಿನ ಮಧ್ಯಾಹ್ನ 12.30ಕ್ಕೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಇರಲಿದೆ. ರಾತ್ರಿ 8ರಿಂದ ಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts