More

    ಪಶ್ಚಿಮ ಬಂಗಾಳಕ್ಕೆ ಶಿವಸೇನೆ ಎಂಟ್ರಿ! ದೀದಿ ಎದುರು ಗೆದ್ದು ಬೀಗಲು ಸಿದ್ಧವಾದ ಪಕ್ಷ

    ಮುಂಬೈ: ಮಹಾರಾಷ್ಟ್ರದ ಪ್ರಮುಖ ಪಕ್ಷ ಮತ್ತು ಆಡಳಿತದಲ್ಲಿರುವ ಪಕ್ಷವಾಗಿರುವ ಶಿವಸೇನೆ ಇದೀಗ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಏಪ್ರಿಲ್​-ಮೇನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿರುವುದಾಗಿ ಶಿವಸೇನೆ ತಿಳಿಸಿದೆ.

    ಪಶ್ಚಿಮ ಬಂಗಾಳದ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸೇನೆಯ ನಾಯಕ ಸಂಜಯ್​ ರಾವತ್​ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ. ಪಕ್ಷದ ಮುಖ್ಯಸ್ಥ ಉದ್ಧವ್​ ಠಾಕ್ರೆ ಮತ್ತು ಪ್ರಮುಖ ನಾಯಕರು ಚರ್ಚೆ ನಡೆಸಿ ನಂತರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

    ಅದಾಗ್ಯೂ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿದೆದೋ ಅಥವಾ ಬೇರೆ ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೋ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಎಷ್ಟು ಸ್ಥಾನಗಳಿಂದ ಸ್ಪರ್ಧಿಸಲಿದೆ ಎನ್ನುವುದನ್ನೂ ತಿಳಿಸಿಲ್ಲ. ಕಾಂಗ್ರೆಸ್​ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯುವುದಾಗಿ ಈಗಾಗಲೇ ಹೇಳಿಕೊಂಡಿದೆ. ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್​ನಂತಹ ಬಲಿಷ್ಠ ಪಕ್ಷಗಳು ಸ್ಪರ್ಧೆಯಲ್ಲಿರುವಾಗ, ಶಿವಸೇನೆ ಎಷ್ಟು ಸ್ಥಾನವನ್ನು ತನ್ನದಾಗಿಸಿಕೊಳ್ಳಬಹುದು ಎನ್ನುವುದು ಸದ್ಯದ ಕುತೂಹಲ. ಮಹಾರಾಷ್ಟ್ರದಂತೆ ಪ. ಬಂಗಾಳದಲ್ಲಿಯೂ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಾಗುವುದೇ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)

    ಬಿಜೆಪಿ ಹಿರಿಯ ಶಾಸಕ ಹೃದಯಾಘಾತಕ್ಕೆ ಬಲಿ; ಗಣ್ಯರ ಸಂತಾಪ

    ಪ್ರೀತಿಸಿ ಮದುವೆಯಾಗಿದ್ದ ಹುಡುಗಿ ಮಸಣ ಸೇರಿದಳು! ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಮೊಬೈಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts