More

    ಅಹಮದಾಬಾದ್​ನಲ್ಲಿ ಸಮಸ್ತೆ, ದೆಹಲಿಯಲ್ಲಿ ಗುಂಡೇಟು… ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ ಶಿವಸೇನೆ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ದಂಪತಿ ಭಾರತದಲ್ಲಿ ಎರಡು ದಿನದ ಪ್ರವಾಸ ಮುಗಿಸಿ ತೆರಳಿದ್ದಾರೆ. ಇದೇ ಸಮಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟ ತಾರಕಕ್ಕೇರಿದ್ದು 18 ಜನರು ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಶಿವಸೇನೆ ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದೆ.

    “ಟ್ರಂಪ್​ ಮತ್ತು ಮೋದಿ ಮಾತನಾಡುತ್ತಿದ್ದಾಗ ದೆಹಲಿ ಹೊತ್ತಿ ಉರಿಯುತ್ತಿತ್ತು. ಪರಿಸ್ಥಿತಿ ಎಂತದ್ದೇ ಇರಲಿ, ಕಾರಣ ಏನೇ ಆಗಿರಲಿ ಕೇಂದ್ರ ಸರ್ಕಾರ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ.” ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

    ಈ ಹಿಂದೆ 1984ರಲ್ಲಿ ಸಿಖ್​ ವಿರೋಧಿ ಗಲಭೆ ನಡೆದಾಗ ಬಿಜೆಪಿ ಪಕ್ಷವು ಕಾಂಗ್ರೆಸ್​ನ್ನು ದೂಷಿಷಿತ್ತು. ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಸಿಖ್​ರನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಮತ್ತು ನೂರಾರು ಸಿಖ್​ ಸಹೋದರರನ್ನು ಕೊಲ್ಲಲಾಯಿತು. ಈಗ ಅದೇ ತರಹದ ಪರಿಸ್ಥಿತಿ ಉಂಟಾಗಿದೆ. ಜನರು ಕತ್ತಿ ಪಿಸ್ತೂಲಿನೊಂದಿಗೆ ರಸ್ತೆಗಿಳಿಯಲಾರಂಭಿಸಿದ್ದಾರೆ. ನಾವೆಲ್ಲರು ಸಾಕ್ಷಿಯಾಗುತ್ತಿರುವ ಈ ದೃಶ್ಯಗಳು ಭಯಾನಕವಾಗಿವೆ. ಇದಕ್ಕೆ ಕಾರಣ ಯಾರು? ಅಮೆರಿಕ ಅಧ್ಯಕ್ಷ ಇಲ್ಲಿರುವಾಗಲೇ ಹೀಗಾಗಿದೆ. ಇದು ಒಳಿತಲ್ಲ ಎಂದು ಹೇಳಲಾಗಿದೆ.

    ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಬಗ್ಗೆಯೂ ಟೀಕಿಸಿರುವ ಶಿವಸೇನೆ, “3 ಬಿಲಿಯನ್​ ಡಾಲರ್​ ಮೌಲ್ಯದ ಇಂಡೋ-ಯುಎಸ್​ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಅಮೆರಿಕ ಭಾರತಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮತ್ತು ಉಪಕರಣಗಳನ್ನು ಮಾರಾಟ ಮಾಡುತ್ತದೆ. ಟ್ರಂಪ್​ ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಕೊನೆಗೊಳಿಸುವಂತೆ ಎಚ್ಚರಿಕೆ ನೀಡಿದರು. ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ವಿನಾಶಕಾರಿ ಕ್ಷಿಪಣಿಗಳನ್ನು ತಲುಪಿಸಲಿದ್ದಾರೆ. ಅಂತಿಮವಾಗಿ ನೋಡಿದರೆ ಇದೊಂದು ವ್ಯಾಪಾರವಷ್ಟೇ. ಟ್ರಂಪ್​ ಮೋದಿಯನ್ನು ಕನಿಷ್ಠ 25 ಬಾರಿ ಹೊಗಳಿದ್ದಾರೆ, ಕನಿಷ್ಠ 25 ಬಾರಿ ಅಪ್ಪಿಕೊಂಡಿದ್ದಾರೆ. 25 ಅಪ್ಪುಗೆಗೆ 3 ಬಿಲಿಯನ್​ ಡಾಲರ್​ ಹಣವನ್ನು ತೆರುತ್ತಿದ್ದೇವೆ.” ಎಂದು ಹೇಳಿದೆ.

    ಎಲ್ಲ ಉಪಕರಣಗಳಿದ್ದರೂ ದೆಹಲಿಯ ಗಲಭೆಯನ್ನು ತಡೆಯುವುದಕ್ಕೆ ಕೇಂದ್ರ ಸರ್ಕಾರದ ಕೈಲಿ ಆಗುತ್ತಿಲ್ಲ. ಬಹಳ ಧೈರ್ಯದಿಂದ ಜಮ್ಮುವಿನಲ್ಲಿದ್ದ 370 ಮತ್ತು 35ಎ ವಿಧಿಗಳನ್ನು ತೆಗೆದುಹಾಕಿದಂತೆ ಇಲ್ಲಿ ಯಾಕೆ ಗಲಭೆಯನ್ನು ತಡೆಯಲಾಗುತ್ತಿಲ್ಲ ಎನ್ನುವುದು ಪ್ರಶ್ನೆ, ಇಲ್ಲಿ ಧೈರ್ಯ ತೋರಿಸಬೇಕಾಗುತ್ತದೆ ಎಂದು ಶಿವಸೇನೆ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts