More

    ವಿವಿಧೆಡೆ 4 ಅಡಕೆ ನೇರ ಖರೀದಿ ಕೇಂದ್ರ

    ಶಿವಮೊಗ್ಗ: ಹೊಸನಗರ, ಬಾಳೆಹೊನ್ನೂರು, ಸಖರಾಯಪಟ್ಟಣ ಹಾಗೂ ಬಸವಾಪಟ್ಟಣದಲ್ಲಿ ಅಡಕೆ ನೇರ ಖರೀದಿ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಮ್ಯಾಮ್ಕೋಸ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
    ಗುರುವಾರ ಮ್ಯಾಮ್ಕೋಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸರ್ವ ಸದಸ್ಯರ ಸಭೆಯಲ್ಲಿ ಸೊರಬದಲ್ಲಿ ನೇರ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯ ಕೇಳಿ ಬಂದಿತ್ತು. ಅದನ್ನು ಈಡೇರಿಸಿದ್ದೇವೆ. ಪ್ರಸ್ತುತ ಒಟ್ಟು ಆರು ಖರೀದಿ ಕೇಂದ್ರಗಳನ್ನು ಮ್ಯಾಮ್ಕೋಸ್ ಹೊಂದಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಬೇಡಿಕೆಯನ್ನು ಪರಿಗಣಿಸಿ ಇನ್ನೂ ನಾಲ್ಕು ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
    ಸದಸ್ಯರು ಹಾಗೂ ಅವರ ಕುಟುಂಬದವರು, ಕೃಷಿ ಕಾರ್ಮಿಕರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ವಿಮೆ ವ್ಯಾಪ್ತಿಗೆ ತರಲಾಗುವುದು. ಸಂಘದಿಂದ ಮಾರಾಟ ಮಾಡಲಾಗುವ ಮ್ಯಾಮ್ಕೋಸ್ ಸಸ್ಯ ಚೈತನ್ಯ ಸಾವಯವ ಗೊಬ್ಬರ, ಡೋಲೋಮೈಟ್ ಸುಣ್ಣವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರಿಗೆ ತಲುಪಿಸಲಾಗುವುದು ಎಂದು ಹೇಳಿದರು.
    ಈ ಸಾಲಿನಲ್ಲಿ ಇ-ಟೆಂಡರ್ ಮೂಲಕ 54 ಸಾವಿರ ಕ್ವಿಂಟಾಲ್ ಹಾಗೂ ನೇರ ಖರೀದಿ ಮೂಲಕ 18 ಸಾವಿರ ಕ್ವಿಂಟಾಲ್ ಅಡಕೆ ಖರೀದಿಸುವ, ಪ್ರತಿ ತಿಂಗಳು ಸರಾಸರಿ 6,250 ಕ್ವಿಂಟಾಲ್ ಮಾರಾಟ ಮಾಡುವ ಉದ್ಧೇಶ ಹೊಂದಲಾಗಿದೆ ಎಂದರು.
    ಉಪಾಧ್ಯಕ್ಷ ಎಚ್.ಎಸ್.ಮಹೇಶ್, ವ್ಯವಸ್ಥಾಪಕ ನಿರ್ದೇಶಕ ಆರ್.ರಾಘವೇಂದ್ರ, ನಿರ್ದೇಶಕರಾದ ಟಿ.ಕೆ.ಪರಾಶರ, ಬಿ.ಸಿ.ನರೇಂದ್ರ, ರತ್ನಾಕರ್, ವೈ.ಎಸ್.ಸುಬ್ರಹ್ಮಣ್ಯ, ಕೃಷ್ಣಮೂರ್ತಿ, ಸಿ.ಬಿ.ಈಶ್ವರ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts