More

    ರಾಜ್ಯಕ್ಕೆ ಪ್ರತ್ಯೇಕ ತಾಳೆ ಬೆಳೆ ನೀತಿ ರೂಪಿಸಲಾಗುವುದು: ಡಾ.ಕೆ.ನಾಗೇಂದ್ರ ಪ್ರಸಾದ್ ಮಾಹಿತಿ

    ಶಿವಮೊಗ್ಗ: ರಾಜ್ಯದಲ್ಲಿ 25 ಸಾವಿರ ಹೆಕ್ಟೇರ್ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಆಂದ್ರಪ್ರದೇಶ ಮಾದರಿಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ತಾಳೆ ಬೆಳೆ ನೀತಿ ರೂಪಿಸುವ ಸಂಬಂಧ ಈಗಾಗಲೇ ಕರಡು ಸಿದ್ಧವಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು.
    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ತಾಳೆ ಬೆಳೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಖಾದ್ಯ ತೈಲದ ಆಮದು ಪ್ರಮಾಣ ಕಡಿತಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಹೀಗಾಗಿ ತಾಳೆ ಬೆಳೆ ಅಭಿವೃದ್ಧಿಗೆ ನಿರ್ಧರಿಸಿದೆ. ರಾಜ್ಯದಲ್ಲೂ ದೊಡ್ಡ ಮಟ್ಟದ ಇಂತಹ ಪ್ರಯತ್ನ ಆರಂಭವಾಗಿದೆ ಎಂದರು.
    ಭಾರತದಲ್ಲಿ ವಾರ್ಷಿಕ ಸುಮಾರು 25 ಮಿಲಿಯನ್ ಟನ್ ಖಾದ್ಯ ತೈಲ ಬಳಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದು ಕೇವಲ 11 ಮಿಲಿಯನ್ ಟನ್ ಮಾತ್ರ. ಪ್ರತಿ ವರ್ಷ 1.40 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಖಾದ್ಯ ತೈಲ ಆಮದಿಗೆ ವ್ಯಯವಾಗುತ್ತಿದೆ ಎಂದು ತಿಳಿಸಿದರು.
    ಮಾರುಕಟ್ಟೆ ಕುಸಿದ ಪರಿಣಾಮ ನಮ್ಮ ರಾಜ್ಯದಲ್ಲಿ ಅನೇಕ ಕೃಷಿಕರು ತಾಳೆ ಬೆಳೆಯಿಂದ ವಿಮುಖರಾದರು. ಈಗ ಕಾಲ ಬದಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲದ ಬೆಲೆ ಹೆಚ್ಚಿದೆ. ಹೀಗಾಗಿ ತಾಳೆಗೂ ಬೇಡಿಕೆ ಬಂದಿದೆ. ನೆರೆಯ ಆಂದ್ರಪ್ರದೇಶದ ಕಾಕಿನಾಡ, ರಾಜಮಂಡ್ರಿ ಭಾಗದಲ್ಲಿ ತಾಳೆಯನ್ನು ಸಾಂಪ್ರದಾಯಿಕ ಬೆಳೆಯೆಂದೇ ಪರಿಗಣಿಸಿದ್ದಾರೆಂದು ಡಾ.ಕೆ.ನಾಗೇಂದ್ರ ಪ್ರಸಾದ್ ವಿವರಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts